Whatsapp: ಸ್ಮಾರ್ಟ್‌ಫೋನ್ ಬಳಕೆ ಮಾಡುವ ಬಹುತೇಕರು ವ್ಯಾಟ್ಸಾಪ್ ಬಳಕೆ ಮಾಡುತ್ತಾರೆ. ಭಾರತದಲ್ಲಿ ಗರಿಷ್ಠ ಮಂದಿ ವ್ಯಾಟ್ಸಾಪ್ ಬಳಕೆ ಮಾಡುತ್ತಾರೆ. ಹಲವು ಬಾರಿ ಕೆಲವರ ವ್ಯಾಟ್ಸಾಪ್ ಮೆಸೇಜ್, ಫಾರ್ವರ್ಡ್, ಕಾಲ್, ವಿಡಿಯೋ ಕಾಲ್ ಕಿರಿಕಿರಿ ಸೃಷ್ಟಿಸುತ್ತದೆ. ಇಂತಹ ಸಂದರ್ಭದಲ್ಲಿ ವ್ಯಾಟ್ಸಾಪ್ ಕಿರಿಕಿರಿ ತಪ್ಪಿಸಲು ಉಪಾಯವಿದೆ.ಬಳಕೆದಾರರ ಸುರಕ್ಷತೆಗೂ ಮುಖ್ಯವ್ಯಾಟ್ಸಾಪ್ ಮೂಲಕ ಹೂಡಿಕೆ ಸಲಹೆ, ಲೋನ್ ಸೇರಿದಂತೆ ಹಲಲವು ಸ್ಕ್ಯಾಮ್ ಸೇರಿದಂತೆ ಕಿರಿಕಿರಿಯಾಗುವ ಮೆಸೇಜ್‌ಗಳು ಪ್ರತಿ ದಿನ ನಿಮ್ಮ ವ್ಯಾಟ್ಸಾಪ್ ಖಾತೆಗೆ ಬರುತ್ತಲೇ ಇರುತ್ತದೆ. ಇಂತಹ ನಂಬರ್, ಅಥವಾ ನಿಮಗೆ ಸಮಸ್ಯೆಯಾಗಬಲ್ಲ ವ್ಯಕ್ತಿಗಳ ನಂಬರ್ ಬ್ಲಾಕ್ ಮಾಡಲು ಸಿಂಪಲ್ ಟಿಪ್ಸ್ ಫಾಲೋ ಮಾಡಿದರೆ ಸಾಕುವ್ಯಾಟ್ಸಾಪ್‌ನಿಂದ ಅನ್‌ವಾಂಟೆಡ್ ನಂಬರ್ ಬ್ಲಾಕ್ ಮಾಡಲು ಸುಲಭ ಮಾರ್ಗ ಇಲ್ಲಿದೆ:
ನಿಮ್ಮ ಫೋನ್‌ನಲ್ಲಿ ವ್ಯಾಟ್ಸಾಪ್ ತೆರೆಯಿರಿ,ಚಾಟ್ ಸೆಕ್ಷನ್‌ಗೆ ತೆರಳಿ ಯಾವ ನಂಬರ್ ಅಥವಾ ಯಾರ ನಂಬರ್ ಬ್ಲಾಕ್ ಮಾಡಬೇಕು, ಅವರ ಮೆಸೇಜ್ ಓಪನ್ ಮಾಡಿ,ಬಲಭಾಗದ ಮೇಲಿರುವ ಮೂರು ಡಾಟ್ ಬಟನ್ ಟ್ಯಾಪ್ ಮಾಡಿಮೋರ್ (More) ಆಯ್ಕೆ ಮಾಡಿ ಬಳಿಕ ಬ್ಲಾಕ್ ಮಾಡಿ,ಮತ್ತೊಮ್ಮೆ ಬ್ಲಾಕ್ ಮಾಡಿ ಖಚಿತಪಡಿಸಿಕೊಳ್ಳಿ.
