4
ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ರಾಜ್ಯ ಸರಕಾರ ನೀಡಿದ್ದ ರಜೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಈ ಕುರಿತ ತಡೆಯಾಜ್ಞೆ ಮಾರ್ಪಡಿಸಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ಎಜಿ ಶಶಿಕಿರಣ್ ಶೆಟ್ಟಿ ಮೇಲ್ಮನವಿ ಮಾಡಿದ್ದರು. ರಾಜ್ಯ ಸರಕಾರದ ವಾದ ಕೇಳದೇ ಹೈಕೋರ್ಟ್ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿದೆ. ಋತುಚಕ್ರ ರಜೆ ಆದೇಶಕ್ಕೂ ಮುನ್ನ ಸರಕಾರ ಕಾನೂನು ಪಾಲಿಸಿದೆ ಹೀಗಾಗಿ ತಡೆಯಾಜ್ಞೆ ಮಾರ್ಪಡಿಸುವಂತೆ ಅಡ್ವಕೇಟ್ ಜನರಲ್ ಮನವಿ ಮಾಡಿದ್ದರು.
ಈ ಕುರಿತು ಸರಕಾರದ ವಾದ ಆಲಿಸಿದ ನಂತರ ಅರ್ಜಿ ಬಗ್ಗೆ ಆದೇಶ ನೀಡಲಾಗುವುದು ಎಂದು ಹೈಕೋರ್ಟ್ ಹೇಳಿದ್ದು, ತಡೆಯಾಜ್ಞೆ ಮಾರ್ಪಡಿಸಿ ನಾಳೆಗೆ ವಿಚಾರಣೆಗೆ ನಿಗದಿ ಮಾಡಿದೆ.
