ಪಣಜಿ: ಗೋವಾ ನೈಟ್‌ಕ್ಲಬ್ ಸ್ಪೋಟದ ಸಂದರ್ಭ ಅದರ ಮಾಲಕರು ಅದೆಷ್ಟು ಬೇಜವಾಬ್ದಾರಿ ತೋರಿದ್ದಾರೆ ಮತ್ತು ನಿಷ್ಕರುಣೆಯಿಂದ ವರ್ತಿಸಿದ್ದಾರೆ ಎಂದು ಇದೀಗ ಬಹಿರಂಗವಾಗಿದೆ. ಅಲ್ಲಿ ಕ್ಲಬ್ಬಿನಲ್ಲಿ ಅಗ್ನಿ ಹೊತ್ತಿ ಉರಿಯುತ್ತಿರುವ ಸಮಯದಲ್ಲೇ ಅದರ ಮಾಲಕರು ವಿಮಾನದ ಟಿಕೆಟ್ ಬುಕ್ ಮಾಡಿದ್ದರು ಅನ್ನೋ ಕಳವಳಕಾರಿ ಅಂಶ ಬೆಳಕಿಗೆ ಬಂದಿದೆ. ದುರಂತದ ಬಳಿಕ ಬಂಧನದಿಂದ ತಪ್ಪಿಸಿಕೊಳ್ಳಲು ಯೋಜಿಸಿದ್ದ ಲೂಥಾ ಸೋದರರು ಥಾಯ್ಲೆಂಡ್‌ಗೆ ಟಿಕೆಟ್ ಬುಕ್ ಮಾಡಿದ್ದರು . ಇದೇ ವೇಳೆ ಬೆಂಕಿ ನಂದಿಸಲು ಅವರ ಸಿಬಂದಿ ಕಷ್ಟ ಪಡುತ್ತಿದ್ದರು ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಅಂದು ಮಧ್ಯರಾತ್ರಿ 1.17ಕ್ಕೆ ಮೇಕ್ ಮೈ ಟ್ರಿಪ್ ವೆಬ್‌ಸೈಟ್ ಮೂಲಕ ಲೂಥಾ ಸೋದರರು ಟಿಕೆಟ್ ಬುಕ್ ಮಾಡಿ, ಬೆಳಿಗ್ಗೆ 5.30ಕ್ಕೆ ದಿಲ್ಲಿಯಿಂದ ಹೊರಡುವ ವಿಮಾನದಲ್ಲಿ ದೇಶ ತೊರೆದರು ಎನ್ನಲಾಗಿದೆ. ಈ ಕ್ರೂರಿಗಳ ಪತ್ತೆಗೆ ಭಾರತವು ಇಂಟರ್‌ಫೋಲ್ ಸಹಾಯದಿಂದ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದೆ.
ನೈಟ್ ಕ್ಲಬ್ ಮಾಲಕರಾದ ಸೌರಭ್ ಮತ್ತು ಗೌರವ್ ಲೂಥಾ ಸಲ್ಲಿಸಿದ್ದ ನಿರೀ ಕ್ಷಣ ಜಾಮೀನು ಅರ್ಜಿಗೆ ತತ್‌ಕ್ಷಣದ ಮಧ್ಯಾಂತರ ಪರಿಹಾರ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಸಹ ಮಾಲಕ ಅಜಯ್ ಗುಪ್ತಾರನ್ನು ದಿಲ್ಲಿಯಲ್ಲಿ ಬಂಧಿಸಿದ್ದು, ಗೋವಾಕ್ಕೆ ಕರೆತರಲು 36 ಗಂಟೆ ಸಮಯ ಟ್ರಾನ್ಸಿಟ್ ರಿಮಾಂಡ್ ನೀಡಲಾಗಿದೆ. ಅಲ್ಲದೆ, ಕ್ಲಬ್ 5 ಸಿಬಂದಿ ಮತ್ತು ವ್ಯವಸ್ಥಾಪಕ ಮಂಡಳಿಯ ಸದಸ್ಯರನ್ನು ಬಂಧಿಸಲಾಗಿದೆ.
