Home » BPL Card ಅಪ್ಡೇಟ್ ಗೆ ಕಠಿಣ ಕ್ರಮ – ಇನ್ಮುಂದೆ ಹೆಸರು ಸೇರ್ಪಡೆ ಮಾಡಲು ಬೇಕು ಈ ಎಲ್ಲ ದಾಖಲೆ!!

BPL Card ಅಪ್ಡೇಟ್ ಗೆ ಕಠಿಣ ಕ್ರಮ – ಇನ್ಮುಂದೆ ಹೆಸರು ಸೇರ್ಪಡೆ ಮಾಡಲು ಬೇಕು ಈ ಎಲ್ಲ ದಾಖಲೆ!!

0 comments

BPL Card ಅಪ್ಡೇಟ್ ಮಾಡಲು ಸರ್ಕಾರವು ಹೊಸ ಕಠಿಣ ಕ್ರಮವನ್ನು ಜಾರಿಗೊಳಿಸಿದ್ದು ಇನ್ಮುಂದೆ ಹೆಸರು ಸೇರಿಸಲು ಜಾತಿ, ಆದಾಯ ಹಾಗೂ ವಿವಾಹ ಪ್ರಮಾಣ ಪತ್ರಗಳು ಅತ್ಯಗತ್ಯ ದಾಖಲೆಗಳಾಗಿವೆ.

ಹೌದು, ಆಹಾರ ಇಲಾಖೆ ಪಡಿತರ ಚೀಟಿಗೆ ಹೊಸದಾಗಿ ಸದಸ್ಯರ ಹೆಸರು ಸೇರ್ಪಡೆ ಮಾಡುವ ಕ್ರಮಗಳನ್ನು ಮತ್ತಷ್ಟು ಬಿಗಿ ಮಾಡಿದ್ದು, ಹೊಸದಾಗಿ ಪಡಿತರ ಚೀಟಿ ಪಡೆಯಲು ಮಾತ್ರವಲ್ಲ, ತಮ್ಮ ಕುಟುಂಬ ಸದಸ್ಯರ ಹೆಸರುಗಳನ್ನು ಸೇರ್ಪಡೆ ಮಾಡಲು ಕೂಡ ಜಾತಿ, ಆದಾಯ, ವಿವಾಹ ಮತ್ತಿತರ ಪ್ರಮಾಣ ಪತ್ರಗಳನ್ನು ಕಡ್ಡಾಯಗೊಳಿಸಲಾಗಿದೆ.

ಹೊಸದಾಗಿ ಮದುವೆಯಾಗಿದ್ದಲ್ಲಿ ಪತಿ-ಪತ್ನಿ ಹೆಸರು ಸೇರಿಸಬಹುದು. ಹೆಸರು ತಿದ್ದುಪಡಿ, ಫೋಟೋ, ವಿಳಾಸ ಬದಲಾವಣೆ, ಹೆಸರು ಡಿಲೀಟ್, ಅಂಗಡಿ ಬದಲಾವಣೆ, ಕಾರ್ಡ್ ನಲ್ಲಿರುವ ಮುಖ್ಯಸ್ಥರ ಬದಲಾವಣೆ ಮಾಡಿಸಬಹುದು. ಆದ್ರೆ ಆರು ವರ್ಷ ಮೇಲ್ಪಟ್ಟಿದ್ದರೆ ಅವರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆರು ವರ್ಷದೊಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ, ತಂದೆ- ತಾಯಿಯ ಆಧಾರ್ ಕಾರ್ಡ್, ತಂದೆ -ತಾಯಿಯ ಪಡಿತರ ಚೀಟಿಯ ಮೂಲ ದಾಖಲೆಗಳು ಕಡ್ಡಾಯವಾಗಿದೆ. ಮದುವೆಯಾಗಿ ಬರುವ ಸೊಸೆಗೆ ವಿವಾಹ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಹಳೆಯ ಕಾರ್ಡ್ ನಿಂದ ಹೆಸರು ತೆಗೆದ ದಾಖಲೆ ಕಡ್ಡಾಯವಾಗಿದೆ ಎಂದು ಇಲಾಖೆಯೂ ತಿಳಿಸಿದೆ.

You may also like