Home » Karnataka Gvt : ಹೊಸದಾಗಿ ವಾಹನ ಖರೀದಿಸುವವರಿಗೆ ಶಾಕ್ – ಸೆಸ್ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ

Karnataka Gvt : ಹೊಸದಾಗಿ ವಾಹನ ಖರೀದಿಸುವವರಿಗೆ ಶಾಕ್ – ಸೆಸ್ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ

0 comments

Karnataka Gvt: ಹೊಸ ವಾಹನ ಖರೀದಿ ಮಾಡುವವರಿಗೆ ಇದೀಗ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದ್ದು, ನೂತನವಾಗಿ ಖರೀದಿಸುವ ವಾಹನದ ಮೌಲ್ಯ ಆಧರಿಸಿ ಹೊಸ ಸೆಸ್ ಜಾರಿಗೊಳಿಸಲಾಗಿದೆ. ಹೀಗಾಗಿ ಇನುಂದೆ ಹೊಸ ವಾಹನ ಖರೀದಿದಾರರಿಗೆ ಸೆಸ್ ಬಿಸಿ ತಟ್ಟಲಿದೆ.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಇಲ್ಲಿ ಸರ್ಕಾರದಿಂದ ರಾಜ್ಯ ರಸ್ತೆ ಸುರಕ್ಷತಾ ತಿದ್ದುಪಡಿ ವಿಧೇಯಕ ಮಂಡನೆ ಮಾಡಲಾಯಿತು. ಇದರ ಅನ್ವಯ ನೂತನವಾಗಿ ಖರೀದಿಸುವ ವಾಹನದ ಮೌಲ್ಯ ಆಧರಿಸಿ ಸೆಸ್ ಜಾರಿಗೊಳಿಸಲಾಗಿದೆ.

ಹಾಲಿ ಎಲ್ಲಾ ಮಾದರಿಯ ವಾಹನಗಳಿಗೆ ಕೇವಲ ರೂ.1000 ವಿಧಿಸಲಾಗಿದ್ದು ತಿದ್ದುಪಡಿ ಅನ್ವಯ ಕಾರಿನ ಬೆಲೆ ಆಧರಿಸಿ ಶೇಕಡಾವಾರು ಸೆಸ್ ಜಾರಿಗೊಳಿಸಲಾಗುತ್ತಿದೆ. ಯಾವ ಮಾದರಿ ಕಾರುಗಳಿಗೆ ಎಷ್ಟು ವಿಧಿಸುವ ಬಗ್ಗೆ ತೀರ್ಮಾನಿಸಲಾಗುತ್ತೆ. ಎಷ್ಟು ಚೆಸ್ ವಿಧಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.

You may also like