Home » TRAFFIC FINE: ಟ್ರಾಫಿಕ್ ದಂಡ ಪಾವತಿಗೆ ಶೇ 50 ರಷ್ಟು ರಿಯಾಯಿತಿ : ಪಾವತಿಗೆ ಇಂದು ಕೊನೆ ದಿನ

TRAFFIC FINE: ಟ್ರಾಫಿಕ್ ದಂಡ ಪಾವತಿಗೆ ಶೇ 50 ರಷ್ಟು ರಿಯಾಯಿತಿ : ಪಾವತಿಗೆ ಇಂದು ಕೊನೆ ದಿನ

0 comments
Traffic Fines

TRAFFIC FINE: ಸಂಚಾರ ನಿಯಮ ಉಲ್ಲಂಘಿಸಿ ದಂಡ (Traffic Fine) ಬಾಕಿ ಉಳಿಸಿಕೊಂಡಿರುವವರಿಗೆ ಕರ್ನಾಟಕ ಸರ್ಕಾರವು ಶೇಕಡಾ 50 ರಷ್ಟು ರಿಯಾಯಿತಿಯೊಂದಿಗೆ (Discount) ದಂಡ ಪಾವತಿಸಲು ಮತ್ತೆ ಅವಕಾಶ ನೀಡಿದ್ದು, ನಾಳೆಯೇ ಕೊನೆಯ ದಿನವಾಗಿದೆ.

ನವೆಂಬರ್ 21,2025 ರಿಂದ ಡಿಸೆಂಬರ್ 12, 2025ರ ವರೆಗೆ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಕಲಾವಕಾಶ ನೀಡಲಾಗಿತ್ತು.ಕರ್ನಾಟಕ ರಾಜ್ಯದ ಸಾರಿಗೆ ಇಲಾಖೆಯಲ್ಲಿ 2019-20ರ ಅವಧಿಯಲ್ಲಿ ಮೋಟಾರು ವಾಹನ ಕಾಯಿದೆ / ನಿಯಮಗಳ ಉಲ್ಲಂಘನೆ ಸಂಬಂಧ ದಾಖಲಾಗಿ ಬಾಕಿ ಇರುವ ಡಿ.ಎಸ್.ಎ ಪ್ರಕರಣಗಳಲ್ಲಿ ದಂಡಪಾವತಿಸಲು ಬಾಕಿ ಇರುವವವರಿಗೆ ಈ ರಿಯಾಯಿಯಿ ಅನ್ವಹಿಸುತ್ತದೆ.

ಕರ್ನಾಟಕ ರಾಜ್ಯ ಪೊಲೀಸ್ (KSP) ಆಯಪ್: ಈ ಅಪ್ಲಿಕೇಶನ್ ಮೂಲಕ ದಂಡದ ವಿವರಗಳನ್ನು ವೀಕ್ಷಿಸಿ, ಆನ್‌ಲೈನ್‌ನಲ್ಲಿ ಪಾವತಿಸಬಹುದು.

BTP ASTraM ಆಪ್: ಬೆಂಗಳೂರು ಸಂಚಾರ ಪೊಲೀಸರ ಅಧಿಕೃತ ಆಪ್‌ನಲ್ಲಿ ವಾಹನ ಸಂಖ್ಯೆ ನಮೂದಿಸಿ, ದಂಡ ಪಾವತಿಸಬಹುದು.ಹತ್ತಿರದ ಸಂಚಾರಿ ಪೋಲೀಸ್‌ ಠಾಣೆಯಲ್ಲಿ ವಾಹನ ನೋಂದಣಿ ಸಂಖ್ಯೆ ಒದಗಿಸಿ ದಂಡ ಪಾವತಿಸಬಹುದು.

ಸಂಚಾರ ನಿರ್ವಹಣಾ ಕೇಂದ್ರದಲ್ಲಿ ನೇರವಾಗಿ ದಂಡದ ಮೊತ್ತ ಪಾವತಿ ಮಾಡಬಹುದು.www.karnatakaone.gov.in ವೆಬ್‌ಸೈಟ್‌ನಲ್ಲಿ ದಂಡ ವಿವರಗಳನ್ನು ಪರಿಶೀಲಿಸಿ, ಪಾವತಿಸಬಹುದು.

ಇನ್‌ಫೆಂಟ್ರಿ ರಸ್ತೆಯಲ್ಲಿರುವ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್‌ಗೆ ಭೇಟಿ ನೀಡಿ ಬಾಕಿ ಇರುವ ಅಪರಾಧಗಳ ವಿವರಗಳನ್ನು ಪಡೆದು ನಂತರ ದಂಡವನ್ನು ಪಾವತಿಸಬಹುದು.

ಈ ರಿಯಾಯಿತಿಯು ಡಿಸೆಂಬರ್ 12 ಒಳಗೆ ಪಾವತಿಸುವವರಿಗೆ ಮಾತ್ರ ಅನ್ವಯವಾಗುತ್ತದೆ. ಅವಧಿ ಮುಗಿದ ನಂತರ, ಪೂರ್ಣ ದಂಡ ಪಾವತಿಸಬೇಕಾಗುತ್ತದೆ. ಆದ್ದರಿಂದ, ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ದಂಡವನ್ನು ಪಾವತಿ ಮಾಡಿ.

ಆನ್‌ಲೈನ್‌ ಪಾವತಿ ಹೇಗೆ ?

ನಿಮ್ಮ ಲ್ಯಾಪ್ ಟಾಪ್ ಅಥವಾ ಮೊಬೈಲ್ ಮೂಲಕ ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ತೆರಳಿ. ವೆಬ್‌ಸೈಟ್ ತೆರೆದ ನಂತರ ಕಾಣಿಸುವ ‘ಚೆಕ್ ಆನ್‌ಲೈನ್ ಸೇವೆಗಳು’- Check Online Services ಆಯ್ಕೆಯನ್ನು ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಲೈಸನ್ಸ್ ನಂಬರ್ ಅಥವಾ ಚಲನ್ ನಂಬರ್ ಅಥಾವ ವೆಹಿಕಲ್ ರಿಜಿಸ್ಟ್ರೇಷನ್ ಸಂಖ್ಯೆಯನ್ನು ಬಳಸಿ ನೀವು ಚಲನ್ ನ್ನು ಹುಡುಕಾಡುವುದಕ್ಕೆ ಆಯ್ಕೆಯಿರುತ್ತದೆ. ಇದರಲ್ಲಿ ಯಾವುದೇ ವಿವರವನ್ನು ನೀವು ಆಯ್ಕೆ ಮಾಡಿಕೊಂಡು ಕ್ಯಾಪ್ಚಾ ಎಂಟರ್ ಮಾಡಿ ಮುಂದುವರಿಯಬಹುದು.ನಂತರ ಚಲನ್ ವಿವರಗಳನ್ನು ಡಿಸ್ ಪ್ಲೇ ಆಗುತ್ತದೆ. ಕೆಲವೊಮ್ಮೆ ವೆಹಿಕಲ್ ನಂಬರ್ ಮತ್ತು ಲೈಸನ್ಸ್ ನಂಬರ್ ನಲ್ಲಿ ಸಪರೇಟ್ ಆಗಿ ಎರಡು ವಿವಿಧ ಚಲನ್ ಗಳನ್ನು ಕಾಣುವುದಕ್ಕೂ ಸಾಧ್ಯತೆಗಳಿರುತ್ತದೆ. ಒಂದು ವೇಳೆ ನಿಮ್ಮ ವೆಹಿಕಲ್ ವಿರುದ್ಧ ಪ್ರಕಟವಾಗಿರುವ ಎಲ್ಲಾ ಚಲನ್​​ಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ನೀವು ಬಯಸಿದ್ದೇ ಆದಲ್ಲಿ ಎರಡೂ ವಿಧಾನದಲ್ಲೂ ಕೂಡ ನೀವು ಹುಡುಕಾಟವನ್ನು ನಡೆಸಬೇಕಾಗುತ್ತದೆ. ಚಲನ್ ವಿವರಗಳು ಜನರೇಟ್ ಆದ ನಂತರ “ಪೇ ನೌ” ಆಯ್ಕೆಯನ್ನು ಹಿಟ್ ಮಾಡಿ ಆನ್ ಲೈನ್ ಪಾವತಿ ಮಾಡಿ.

You may also like