Home » Vinesh Phogat: ನಿವೃತ್ತಿಯಿಂದ ಹಿಂದೆ ಸರಿದ ವಿನೇಶ್ ಫೋಗಟ್ – 2028ರ ಒಲಿಂಪಿಕ್ಸ್‌ನಲ್ಲಿ ಅಖಾಡಕ್ಕಿಳಿಯುವುದಾಗಿ ಘೋಷಣೆ

Vinesh Phogat: ನಿವೃತ್ತಿಯಿಂದ ಹಿಂದೆ ಸರಿದ ವಿನೇಶ್ ಫೋಗಟ್ – 2028ರ ಒಲಿಂಪಿಕ್ಸ್‌ನಲ್ಲಿ ಅಖಾಡಕ್ಕಿಳಿಯುವುದಾಗಿ ಘೋಷಣೆ

0 comments
Vinesh Pogat

Vinesh Phogat: ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics) 150 ಗ್ರಾಂ ಹೆಚ್ಚುವರಿ ತೂಕದಿಂದ ಪದಕ ವಂಚಿತರಾಗಿದ್ದ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಇದ್ದಕ್ಕಿದ್ದಂತೆ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು.

ಕೂದಲೆಳೆ ಅಂತರದಲ್ಲಿ ಪದಕ ವಂಚಿತರಾದ ನಿರಾಶೆಯಿಂದ ಈ ಆಘಾತಕ್ಕಾರಿ ನಿರ್ಧಾರ ತೆಗೆದುಕೊಂಡಿರು. ಇದೀಗ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದಿದ್ದು, ಮತ್ತೆ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.ಹೌದು.. 2028 ರ ಲಾಸ್‌ಏಂಜಲೀಸ್‌ ಒಲಿಂಪಿಕ್ಸ್‌ನತ್ತ (2028 LA Olympics) ಚಿತ್ತ ಹರಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದಾರೆ.

ಮತ್ತೆ ಸ್ಪರ್ಧಿಸುವ ನಿರ್ಧಾರಕ್ಕೆ ಕಾರಣವಾದ ಆಂತರಿಕ ಶಕ್ತಿಯನ್ನು ಉಲ್ಲೇಖಿಸಿದ ಅವರು, ʻಬೆಂಕಿ ಎಂದಿಗೂ ಆರಲಿಲ್ಲ, ಅದು ಆಯಾಸದ ಅಡಿಯಲ್ಲಿ ಹೂತುಹೋಗಿತ್ತು. ಈಗ ಭಯವಿಲ್ಲದ ಹೃದಯದೊಂದಿಗೆ, ಬಗ್ಗದ ಮನೋಭಾವದೊಂದಿಗೆ ಲಾಸ್ ಏಂಜಲ್ಸ್ LA28 ಕಡೆ ಹೆಜ್ಜೆ ಹಾಕುತ್ತಿದ್ದೇನೆʼ ಎಂದು ಹೇಳಿದ್ದಾರೆ. ಇದೀಗ 2028ರ ಒಲಿಂಪಿಕ್ಸ್‌ಗೆ 2 ವರ್ಷಗಳು ಬಾಕಿಯಿದ್ದು, ಶೀಘ್ರದಲ್ಲೇ ತಯಾರಿ ಆರಂಭಿಸಲು‌ ನಿರ್ಧರಿಸಿದ್ದಾರೆ.

You may also like