Home » New year: ಹೊಸವರ್ಷಕ್ಕೆ ಕ್ಲಬ್, ಬಾರ್, ಪಬ್‌ಗಳಲ್ಲಿ ಪಟಾಕಿ ಆಚರಣೆ ಬ್ಯಾನ್

New year: ಹೊಸವರ್ಷಕ್ಕೆ ಕ್ಲಬ್, ಬಾರ್, ಪಬ್‌ಗಳಲ್ಲಿ ಪಟಾಕಿ ಆಚರಣೆ ಬ್ಯಾನ್

0 comments
New Year Guidelines

New year: ಗೋವಾದ ನೈಟ್ ಕ್ಲಬ್‌ನಲ್ಲಿ ನಡೆದ ಅಗ್ನಿ ದುರಂದಲ್ಲಿ 25 ಮಂದಿ ಸಜೀವ ದಹನವಾಗಿದ್ದಾರೆ. ಈ ಘಟನೆಯಿಂದ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ಸಮೀಪಿಸುತ್ತಿದ್ದಂತೆ ಕ್ಟಟು ನಿಟ್ಟಿನ ಮಾರ್ಗಸೂಚಿ ಹೊರಡಿಸಲಾಗಿದೆ.

ಕ್ಲಬ್, ಬಾರ್, ರೆಸ್ಟೋರೆಂಟ್, ಪಬ್‌ಗಳಲ್ಲಿ ಪಟಾಕಿ ಸಂಭ್ರಮಾಚರಣೆ ಬ್ಯಾನ್ ಮಾಡಲಾಗಿದೆ. ಯಾವುದೇ ರೀತಿಯ ಪಟಾಕಿ ಸಿಡಿಸಿ ಹೊಸ ವರ್ಷ ಆಚರಿಸುವಂತಿಲ್ಲ ಎಂದು ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿ ವ್ಯಾಪ್ತಿಯ ಎಲ್ಲಾ ಬಾರ್, ಕ್ಲಬ್, ಪಬ್, ರೆಸ್ಟೋರೆಂಟ್‌ಗಳಿಗೆ ಸೂಚನೆ ನೀಡಿದೆ.ಹೊಸ ವರ್ಷಕ್ಕೆ ಕಠಿಣ ನಿಮಯಹೊಸ ವರ್ಷದ ಸಂಭ್ರಮಾಚರಣೆಗಳು ಆರಂಭಗೊಂಡಿದೆ. ಹಲವು ಕ್ಲಬ್, ಬಾರ್, ಪಬ್‌ಗಳಲ್ಲಿ ಈಗಲೇ ಬುಕಿಂಗ್ ಆರಂಭಗೊಂಡಿದೆ. ಆದರೆ ಯಾವುದೇ ರೆಸ್ಟೋರೆಂಟ್, ಕ್ಲಬ್ ಸೇರಿದಂತೆ ಇತರ ರೆಸ್ಟೋರೆಂಟ್‌ಗಳಲ್ಲಿ ಹೊಸ ವರ್ಷಕ್ಕೆ ಪಟಾಕಿ ಸಂಬ್ರಮ ಆಚರಿಸುವಂತಿಲ್ಲ. ಎಲೆಕ್ಟ್ರಿಕ್ ಪಟಾಕಿಗಳನ್ನು ಸಿಡಿಸುವಂತಿಲ್ಲ. ಈ ಕುರಿತು ದೆಹಲಿ ಪೊಲೀಸರು ಹೊಟೆಲ್ ಕ್ಲಬ್ ರೆಸ್ಟೋರೆಂಟ್ (ಹೆಚ್‌ಸಿಆರ್)ಗೆ ಸೂಚನೆ ನೀಡಿದೆ.

ದೆಹಲಿ ವ್ಯಾಪ್ತಿಯ ಎಲ್ಲಾ ಹೆಚ್‌ಸಿಆರ್ ಅಗ್ನಿ ದುರಂತದ ಸಂದರ್ಭದಲ್ಲಿ ತುರ್ತು ಪಾರಾಗಲು ಬಳಸುವ ಫೈರ್ ಸೇಫ್ಟಿ ಸಲಕರೆ ಇಟ್ಟಿರಬೇಕು. ಇದರ ಲೈಸೆನ್ಸ್ ನವೀಕರಣ, ಸಲಕರೆಗಳು ಕಾರ್ಯಪ್ರವೃತ್ತಿಸುವಂತೆ ನೋಡಿಕೊಳ್ಳಬೇಕು. ಲೈಸೆನ್ಸ್ ನವೀಕರಣದಲ್ಲಿ ಯಾವುದೇ ರೀತಿಯ ನಿಯಮ ಉಲ್ಲಂಘನೆಯಾದರೂ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.ಹೆಚ್‌ಸಿಆರ್ ಆವರಣದಲ್ಲಿ ಪಟಾಕಿ ಸಿಡಿಸುವಂತಿಲ್ಲಹೆಚ್‌ಸಿಆರ್ ಆವರಣದಲ್ಲಿ ಯಾವುದೇ ರೀತಿಯ ಪಟಾಕಿ ಸಿಡಿಸುವಂತಿಲ್ಲ. ಯಾವುದೇ ರೀತಿಯ ಫೈರ್ ವರ್ಕ್ ಮಾಡುವಂತಿಲ್ಲ. ಹಸಿರು ಪಟಾಕಿ, ಎಲೆಕ್ಟ್ರಿಕ್ ಪಟಾಕಿಯೂ ಸಿಡಿಸುವಂತಿಲ್ಲ.

ದೆಹಲಿಯಲ್ಲಿ ನೋಂದಣಿಯಾದ ಒಟ್ಟು 950 ಬಾರ್, ರೆಸ್ಟೋರೆಂಟ್, ಕ್ಲಬ್‌ಗಳಿವೆ. ಎಲ್ಲಾ ಹೆಚ್‌ಸಿಆರ್‌ಗೆ ನೋಟಿಸ್ ನೀಡಲಾಗಿದೆ.ಹೊಸ ವರ್ಷ ಆಚರಣೆ ವೇಳೆ ಯಾವುದೇ ರೀತಿಯ ಅಹಿತರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಲು ಪೊಲೀಸರು ಸೂಚಿಸಿದ್ದಾರೆ. ಸಾರ್ವಜನಿಕ ಪ್ರದೇಶಗಳಲ್ಲಿ ಅಥವಾ ಖಾಸಗಿ ಪ್ರದೇಶದಲ್ಲಿ ಆಯೋಜಿಸುವ ಪಾರ್ಟಿ, ಕಾರ್ಯಕ್ರಮಗಳಿಗೂ ಕಟ್ಟು ನಿಟ್ಟಿನ ಮಾರ್ಗಸೂಚಿ ಪಾಲಿಸಲು ಸೂಚಿಸಲಾಗಿದೆ. ಪಾರ್ಟಿಗೆ ಆಗಮಿಸುವ ಪ್ರತಿಯೊಬ್ಬರಿಗೆ ಸುರಕ್ಷತೆ ಒದಗಿಸಲು ಸೂಚಿಸಲಾಗಿದೆ.

ಪ್ರಮುಖವಾಗಿ ಮಹಿಳೆಯರು, ಹೆಣ್ಣುಮಕ್ಕಳಿಗೆ ಹೆಚ್ಚಿನ ಭದ್ರತೆ ನೀಡಲು ಸೂಚಿಸಲಾಗಿದೆ. ಮಹಿಳಾ ಬೌನ್ಸರ್ ಸೇರಿದಂತೆ ಹಲವು ರೀತಿಯ ಕ್ರಮಕ್ಕೆ ಸೂಚಿಸಿದ್ದಾರೆ. ಇದೇ ವೇಳೆ ಡ್ರಿಂಕ್ ಅಂಡ್ ಡ್ರೈವ್ ಚೆಕ್ ಮಾಡಲು ಟ್ರಾಫಿಕ್ ಪೊಲೀಸರು ಸಜ್ಜಾಗಿದ್ದಾರೆ. ಹಲವು ಪೊಲೀಸರು ಮಫ್ತಿಯಲ್ಲಿ ಗಸ್ತು ತಿರುಗಲು ಯೋಜನೆ ರೂಪಿಸಿಕೊಂಡಿದ್ದಾರೆ.

You may also like