Home » Gruhalakshmi : ಗೃಹಲಕ್ಷ್ಮಿ ಯೋಜನೆಯಲ್ಲಿ ಅಕ್ರಮ – ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರಿಗೆ ಇದು ಗೊತ್ತಾಗಿದ್ದು ಹೇಗೆ?

Gruhalakshmi : ಗೃಹಲಕ್ಷ್ಮಿ ಯೋಜನೆಯಲ್ಲಿ ಅಕ್ರಮ – ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರಿಗೆ ಇದು ಗೊತ್ತಾಗಿದ್ದು ಹೇಗೆ?

0 comments

Gruhalakshmi : ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಕೆಲವು ದಿನಗಳಿಂದ ಗೃಹಲಕ್ಷ್ಮಿ ಯೋಜನೆಯ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಇದೀಗ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಹೀರೋ ಆಗಿದ್ದಾರೆ. ಕಾರಣ ಅವರು ಗೃಹಲಕ್ಷ್ಮಿ ಯೋಜನೆಯಲ್ಲಿ ನಡೆದ ಅಕ್ರಮವನ್ನು ವಿವರವಾಗಿ ಸದನಕ್ಕೆ ಬಹಿರಂಗಪಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಹೌದು, ಗೃಹಲಕ್ಷ್ಮಿ ಹಣವನ್ನು ಎಲ್ಲಾ ತಿಂಗಳೂ ಕೊಡಲಾಗಿದೆ ಎಂದಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ನಡುವೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಹಾಕಿಲ್ಲ ಎಂದು ಮಹೇಶ್ ಟೆಂಗಿನಕಾಯಿ ದಾಖಲೆ ಸಮೇತ ಬಯಲಿಗೆಳೆಡಿದ್ದಾರೆ. ಇದು ರಾಜ್ಯ ಸರ್ಕಾರವನ್ನೇ ಅನುಮಾನದಿಂದ ನೋಡುವಂತಾಯಿತು. ಮಹೇಶ್ ಟೆಂಗಿನಕಾಯಿಯವರು ಗೃಹಲಕ್ಷ್ಮಿ ಯೋಜನೆಯಲ್ಲಿ ನಡೆದ ಅಕ್ರಮವನ್ನು ದಾಖಲೆ ಸಮೇತ ಸದನದಲ್ಲಿ ಬಹಿರಂಗಪಡಿಸಿ, ಹೀರೋ ಆಗಿದ್ದಾರೆ. ಆದರೆ ಮಹೇಶ್ ಅವರಿಗೆ ಈ ವಿಚಾರ ಗೊತ್ತಾಗಿದ್ದು ಹೇಗೆ ಎಂಬ ವಿಚಾರ ಇಲ್ಲಿದೆ ನೋಡಿ.

ಗೃಹಲಕ್ಷ್ಮಿ ಹಣದಲ್ಲಿ ವ್ಯತ್ಯಯವಾಗಿದೆ ಎಂದು ಅವರಿಗೆ ತಮ್ಮ ಮನೆ ಕೆಲಸದವರನ್ನು ವಿಚಾರಿಸಿದಾಗ ತಿಳಿದಿತ್ತಂತೆ. ನಡುವೆ ಎರಡು ತಿಂಗಳ ಹಣ ಬಂದಿಲ್ಲ ಎಂದಾಗ ಅವರಿಗೆ ಇದರಲ್ಲಿ ಏನೋ ಸಮಸ್ಯೆಯಿದೆ ಎಂದು ಅನುಮಾನವಾಗಿ ಕಾರ್ಯಪ್ರವೃತ್ತರಾದ ಅವರು ಜಿಲ್ಲೆ ಜಿಲ್ಲೆಗಳಿಂದ ದಾಖಲೆ ತರಿಸಿ ಸರಿಯಾದ ರೀತಿಯಲ್ಲೇ ಸರ್ಕಾರಕ್ಕೆ ಪೆಟ್ಟ ಕೊಟ್ಟಿದ್ದಾರೆ. ಹೀಗಾಗಿ ಶಾಸಕರನ್ನು ಈಗ ಸೋಷಿಯಲ್ ಮೀಡಿಯಾದಲ್ಲಿ ಪಬ್ಲಿಕ್ ಮತ್ತು ಬಿಜೆಪಿ ಬೆಂಬಲಿಗರು ಹಾಡಿ ಹೊಗಳುತ್ತಿದ್ದಾರೆ.

You may also like