Home » Viral Video : ಬೇರೆ ಜಾತಿ ಯುವಕನ ಜೊತೆಗಿನ 11 ವರ್ಷದ ಪ್ರೇಮವನ್ನು ಹೇಳಿಕೊಂಡ ಮಗಳು – ತಂದೆಯ ಪ್ರತಿಕ್ರಿಯೆ ಕಂಡು ‘ಗ್ರೇಟ್’ ಎಂದ ಜನ

Viral Video : ಬೇರೆ ಜಾತಿ ಯುವಕನ ಜೊತೆಗಿನ 11 ವರ್ಷದ ಪ್ರೇಮವನ್ನು ಹೇಳಿಕೊಂಡ ಮಗಳು – ತಂದೆಯ ಪ್ರತಿಕ್ರಿಯೆ ಕಂಡು ‘ಗ್ರೇಟ್’ ಎಂದ ಜನ

0 comments

Viral Video : ಇಂದಿನ ಕಾಲದಲ್ಲಿ ಮಕ್ಕಳು ಪ್ರೀತಿ ಪ್ರೇಮ ಎಂದು ಹೋದರೆ ಹೆತ್ತವರು ಭಯ ಪಡುವುದುಂಟು. ಅಲ್ಲದೆ ಕೆಲವು ಪೋಷಕರು ಮಕ್ಕಳನ್ನು ಗದರಿಸಿ, ಬೆದರಿಸಿ ಅವುಗಳಿಂದ ದೂರ ಇರಿಸುವುದನ್ನು ಕಾಣಬಹುದು. ಇನ್ನು ಕೆಲವೆಡೆಯಂತೂ ಪ್ರೀತಿ, ಪ್ರೇಮ ವಿಚಾರವಾಗಿ ಕೆಲವು ಮರ್ಯಾದೆ ಹತ್ಯೆಗಳು ಕೂಡ ನಡೆದಿದೆ. ಇಂತಹ ಕೆಲವು ಸನ್ನಿವೇಶಗಳನ್ನು ಕಂಡು ಮಕ್ಕಳು ತಮ್ಮ ಪ್ರೀತಿಯ ವಿಚಾರವನ್ನು ಪೋಷಕರಲ್ಲಿ ಹೇಳಿಕೊಳ್ಳಲು ಹೆದರುತ್ತಾರೆ, ಹಿಂಜರಿಯುತ್ತಾರೆ. ಆದರೆ  ಇದೆಲ್ಲದರ ನಡುವೆ ಇಲ್ಲೊಬ್ಬಳು ಯುವತಿ ತನ್ನ 11 ವರ್ಷದ ಅಂತರ್ಜಾತಿ ಪ್ರೇಮವನ್ನು ಅಪ್ಪನಲ್ಲಿ ಹೇಳಿಕೊಂಡಿದ್ದಾಳೆ. ಇದಕ್ಕೆ ಅಪ್ಪನ ಪ್ರತಿಕ್ರಿಯೆ ಕಂಡು ಜನರೆಲ್ಲರೂ ಗ್ರೇಟ್ ಎಂದಿದ್ದಾರೆ.

ಹೌದು, ಸೋಶಿಯಲ್ ಮೀಡಿಯಾದಲ್ಲಿ ಪ್ರೀತಿಯ ವಿಚಾರವಾಗಿ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಇದರಲ್ಲಿ ಯುವತಿ ಒಬ್ಬಳು ತನ್ನ ಅಪ್ಪನ ತೊಡೆಯ ಮೇಲೆ ಮಲಗಿಕೊಂಡು ಬಿಕ್ಕಿಬಿಕ್ಕಿ ಅಳುತ್ತಾ ತಾನು 11 ವರ್ಷದಿಂದ ಅನ್ಯ ಜಾತಿಯ ಯುವಕನನ್ನು ಪ್ರೀತಿ ಮಾಡುತ್ತಿರುವ ವಿಚಾರವನ್ನು ಹೇಳಿಕೊಂಡಿದ್ದಾಳೆ. ಅಪ್ಪ ಏನನ್ನುತ್ತಾರೋ ಎಂಬ ಭಯ ಆಕೆಯಲ್ಲಿ ಕಾಡುತ್ತಿದೆ. ಮೊದಲಿಗೆ ತಾನು ಬಯಸಿದ್ದನ್ನು ಹೇಳಲಾಗದೆ ತಡವರಿಸುತ್ತಾಳೆ. ಮಗಳ ಆತಂಕವನ್ನು ಗ್ರಹಿಸಿದ ತಂದೆ, ಅವಳು ಏನು ಹೇಳುತ್ತಾಳೆ ಎಂದು ಯೋಚಿಸುತ್ತಾ ಶಾಂತವಾಗಿ ಕಾಯುತ್ತಾರೆ.

ಈ ವೇಳೆ ಮಗಳು ಅಂತರ್ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದಾಳೆ ಎಂದು ಕೋಪಗೊಳ್ಳದೇ ತಂದೆ ಬಹಳ ಶಾಂತವಾಗಿಯೇ ಆಕೆಯನ್ನು ಸಮಾಧಾನಿಸಿ ಆಕೆಯ ಪ್ರೇಮ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಮಗಳು ಹೇಳುವ ಮಾತುಗಳನ್ನೆಲ್ಲಾ ನಿಧಾನವಾಗಿ ಕೇಳುವ ತಂದೆ ಆಕೆಯನ್ನು ಅಳು ನಿಲ್ಲಿಸುವಂತೆ ಕೇಳುತ್ತಾರೆ. ಅಲ್ಲದೇ ಸಮಾಧಾನಿಸುತ್ತಾರೆ. ಸಮಾಧಾನದಿಂದ ಭಾವುಕರಾಗಿ ‘ಮಗಳೇ ಎಲ್ಲರ ಜೀವನದಲ್ಲಿ ಪ್ರೀತಿಯಾಗುತ್ತದೆ. ಅದರಿಂದ ಭಯಪಡುವಂತಹದ್ದು ಏನಿದೆ?’ ಎಂದು ಹೇಳುತ್ತಾರೆ. ಈ ಉತ್ತರ ಕೇಳುತ್ತಿದ್ದಂತೆ ಮಗಳು ಭಾವುಕಳಾಗಿ ಒಂದು ಕ್ಷಣ ಕುಸಿದು ಬೀಳುತ್ತಾಳೆ. 

ಸಧ್ಯ ತಂದೆ ಮಗಳನ್ನು ಅರ್ಥ ಮಾಡಿಕೊಂಡಿರುವುದಕ್ಕೆ ಅವಳನ್ನು ಸಮಾಧಾನಿಸಿ ಶಾಂತವಾಗಿರುವುದಕ್ಕೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅನೇಕರು, ತಂದೆ ಮಗಳ ಬಾಂಧವ್ಯ ಹೀಗೆ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವು ಮದುವೆ ವಯಸ್ಸಿಗೆ ಬಂದಾಗ ಯುವಕ ಯುವತಿಯರು ತಮ್ಮ ಪ್ರೀತಿಯ ವಿಷಯವನ್ನು ತಂದೆ ತಾಯಿಯ ಬಳಿ ಧೈರ್ಯವಾಗಿ ಹೇಳಿಕೊಳ್ಳಬೇಕು ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.

https://www.instagram.com/reel/DSPBvJVEVkS/?igsh=MXhkaThpcWc1anRpeg==

You may also like