ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಹಿಂದೂ ಯುವಕನ ಹತ್ಯೆಗೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಲಾಗಿದೆ ಎಂದು ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಶನಿವಾರ ತಿಳಿಸಿದ್ದಾರೆ.
ಯೂನಸ್ ಆಡಳಿತದ ಪ್ರಕಾರ, ಗುಂಪು ಹಲ್ಲೆಯಿಂದ ಕೊಲ್ಲಲ್ಪಟ್ಟ ಯುವಕ 27 ವರ್ಷದ ದೀಪು ಚಂದ್ರ ದಾಸ್ ಆಗಿದ್ದು, ಅವರು ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದರು. ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ, ದೀಪು ಅವರನ್ನು ಕ್ರೂರವಾಗಿ ಥಳಿಸಲಾಯಿತು, ಇದರಿಂದಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಯೂನಸ್ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಕ್ಷಿಪ್ರ ಕಾರ್ಯಾಚರಣಾ ಬೆಟಾಲಿಯನ್ (RAB) ಏಳು ಶಂಕಿತರನ್ನು ಬಂಧಿಸಿದೆ ಎಂದು ಮುಖ್ಯ ಸಲಹೆಗಾರ ತಿಳಿಸಿದ್ದಾರೆ.
ಬಂಧಿತರಲ್ಲಿ ಮೊಹಮ್ಮದ್ ಲಿಮೋನ್ ಸರ್ಕಾರ್ (19), ಮೊಹಮ್ಮದ್ ತಾರಿಕ್ ಹುಸೇನ್ (19), ಮೊಹಮ್ಮದ್ ಮಾಣಿಕ್ ಮಿಯಾನ್ (20), ಇರ್ಷಾದ್ ಅಲಿ (39), ನಿಜುಮ್ ಉದ್ದೀನ್ (20), ಅಲಂಗೀರ್ ಹುಸೇನ್ (38) ಮತ್ತು ಮೊಹಮ್ಮದ್ ಮಿರಾಜ್ ಹುಸೇನ್ ಎಕಾನ್ (46) ಎಂಬುವವರನ್ನು ಬಂಧನ ಮಾಡಲಾಗಿದೆ.
