Home » ಬಿಜೆಪಿಯಿಂದ 2ನೇ ಬಾರಿ ಗಾಂಧೀಜಿ ಹತ್ಯೆ

ಬಿಜೆಪಿಯಿಂದ 2ನೇ ಬಾರಿ ಗಾಂಧೀಜಿ ಹತ್ಯೆ

0 comments

ಹೊಸದಿಲ್ಲಿ: ಮನರೇಗಾ ಯೋಜನೆಗೆ ಪರ್ಯಾಯವಾಗಿ ರೂಪಿಸಿರುವ ವಿಬಿ-ಜಿ ರಾಮ್ ಜಿ ಯೋಜನೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ತೆಗೆದು ಹಾಕಿರುವ ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಆಕ್ರೋಶ ಹೊರಹಾಕಿದ್ದಾರೆ.

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, “ಮನರೇಗಾದಿಂದ ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆದು ಹಾಕುವ ಮೂಲಕ ಬಿಜೆಪಿಗರು ಎರಡನೇ ಬಾರಿಗೆ ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ್ದಾರೆ. ನನ್ನ ಪ್ರಕಾರ, ಇದು ಮಹಾತ್ಮ ಗಾಂಧಿಯವರ ಎರಡನೇ ಹತ್ಯೆಯಾಗಿದೆ. 1948ರ ಜನವರಿ 30ರಂದು ಅವರನ್ನು ಮೊದಲ ಬಾರಿ ಕೊಲ್ಲಲಾಗಿತ್ತು. ಸದ್ಯ ಬಿಜೆಪಿಗರು ಅವರನ್ನು ಮತ್ತೊಮ್ಮೆ ಕೊಂದಿದ್ದಾರೆ ಎಂದರೆ ತಪ್ಪಲ್ಲ’ ಎಂದು ಅವರು ಕಿಡಿಕಾರಿದ್ದಾರೆ.

ಹೊಸ ವಿಬಿ-ಜಿ ರಾಮ್ ಜಿ ಕಾಯಿದೆಯನ್ನು ಕೂಡಲೇ • ರದ್ದುಗೊಳಿಸಬೇಕು. ಹಾಗೆಯೇ ಮನರೇಗಾ ಯೋಜನೆಯನ್ನು ಪುನಃ ಸ್ಥಾಪಿಸುವವರೆಗೂ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಲಿದೆ. ನಮ್ಮ ಪಕ್ಷದ ಕಾರ್ಯಕರ್ತರು ಪ್ರತಿ ಮನೆ, ಎಲ್ಲ ಹಳ್ಳಿಗಳಿಗೂ ತೆರಳಿ ಬಿಜೆಪಿಗರ ವಂಚನೆಯನ್ನು ಬಹಿರಂಗಪಡಿಸಲಿದ್ದಾರೆ ಎಂದರು.

You may also like