Home » ಐದು ವರ್ಷ ಕೆಲಸ ಮಾಡಿದರೆ ಫ್ಲ್ಯಾಟ್ ಗಿಫ್ಟ್

ಐದು ವರ್ಷ ಕೆಲಸ ಮಾಡಿದರೆ ಫ್ಲ್ಯಾಟ್ ಗಿಫ್ಟ್

0 comments

ಚೀನಾದ ಕಂಪನಿಯೊಂದು ಮೂರು ವರ್ಷಗಳ ಅವಧಿಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ 1.3 ಕೋಟಿ ರೂ.ಗಳಿಂದ 1.5 ಕೋಟಿ ರೂ.ಗಳವರೆಗಿನ 18 ಫ್ಲಾಟ್‌ಗಳನ್ನು ವಿತರಿಸುವುದಾಗಿ ಘೋಷಿಸಿದೆ. ಮಹತ್ವಾಕಾಂಕ್ಷೆಯ ವಸತಿ ಪ್ರೋತ್ಸಾಹವು ಉದ್ಯೋಗಿಗಳ ಧಾರಣವನ್ನು ಹೆಚ್ಚಿಸುವ ಮತ್ತು ಕೌಶಲ್ಯಪೂರ್ಣ ಪ್ರತಿಭೆಗಳನ್ನು ಸೆಳೆಯುವ ಗುರಿಯನ್ನು ಹೊಂದಿದೆ ಎಂದು ಮೂಲಗಳು ವರದಿ ಮಾಡಿವೆ.

ಫಲಾನುಭವಿಗಳಲ್ಲಿ ಕಂಪನಿಯ ಇಬ್ಬರು ಉದ್ಯೋಗಿಗಳೂ ಸೇರಿದ್ದಾರೆ – ಅವರಿಗೆ ಜಂಟಿಯಾಗಿ 1,550 ಚದರ ಅಡಿ ವಿಸ್ತೀರ್ಣದ ಮನೆಯನ್ನು ನೀಡಲಾಯಿತು.

ಝಜಿಯಾಂಗ್ ಗುಶೆಂಗ್ ಆಟೋಮೋಟಿವ್ ಟೆಕ್ನಾಲಜಿ ಕಂ. ಲಿಮಿಟೆಡ್ ತನ್ನ ಉದ್ಯೋಗಿಗಳಿಗೆ 18 ಫ್ಲ್ಯಾಟ್ ಗಳನ್ನು ವಿತರಿಸುವ ಯೋಜನೆಯನ್ನು ಘೋಷಿಸಿದ್ದು ಚೀನಾದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಈ ವರ್ಷ ಈಗಾಗಲೇ ಐದು ಫ್ಲ್ಯಾಟ್‌ಗಳನ್ನು ಹಂಚಲಾಗಿದೆ. ಉಳಿದ ಫ್ಲ್ಯಾಟ್‌ ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಹಂಚಲಾಗುತ್ತದೆ. ಈ ಫ್ಲ್ಯಾಟ್‌ಗಳು ಕಂಪನಿಗೆ 5 ಕಿಲೋ ಮೀಟ‌ರ್ ಹತ್ತಿರದಲ್ಲೇ ಇವೆ. 450 ಉದ್ಯೋಗಿಗಳು ಇರುವ ಈ ಕಂಪನಿ 2024ರಲ್ಲಿ 623 ಕೋಟಿ ರೂ. ಮೌಲ್ಯವನ್ನು ಹೊಂದಿತ್ತು.

ಇದು ನೀಡುತ್ತಿರುವ ಫ್ಲ್ಯಾಟ್‌ಗಳಿಗೆ ಮಾರುಕಟ್ಟೆಯಲ್ಲಿ 1.2 ಕೋಟಿ ರೂ. ಬೆಲೆ ಇದೆ. ಉದ್ಯೋಗಿಗಳು ಕಂಪನಿಯಲ್ಲಿ ಐದು ವರ್ಷ ಪೂರ್ತಿಗೊಳಿಸಿದರೆ ಫ್ಲ್ಯಾಟ್‌ನ ಮಾಲೀಕತ್ವ ಸಿಗುತ್ತದೆ. ಮಾತ್ರವಲ್ಲ, ಮನೆ ಪಡೆದವರು ಇನ್ನೂ ಐದು ವರ್ಷ ಕಂಪನಿಯಲ್ಲೇ ಇರಬೇಕಾಗುತ್ತದೆ. ಕಂಪನಿಯ ಮ್ಯಾನೇಜರ್ ಜಿಯಾಯುವಾನ್ ಹೇಳುವಂತೆ, ‘ಕಂಪನಿಯ ಪ್ರತಿಭಾನ್ವಿತ ಹಾಗೂ ಅತ್ಯುತ್ತಮ ಕೆಲಸಗಾರರು ಬೇರೆ ಕಂಪನಿಗೆ ಹೋಗಬಾರದು ಎಂದು ಈ ಯೋಜನೆಗೆ ಕೈಹಾಕಲಾಗಿದೆ’.

You may also like