Vijayalakshmi Darshan : ಕನ್ನಡದ ಇಬ್ಬರು ಸೂಪರ್ ಸ್ಟಾರ್ ಗಳಾಗಿರುವ ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ನಡುವೆ ಯಾಕೋ ಇದೀಗ ಮುಸುಕಿನ ಗುದ್ದಾಟ ಶುರುವಾದಂತೆ ಕಾಣುತ್ತಿದೆ. ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ನಡೆದ ಮಾರ್ಕ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಈ ಕುರಿತಾಗಿ ಕಿಚ್ಚ ‘ಕಿಚ್ಚನ್ನು’ ಹಚ್ಚಿದ್ದಾರೆ. ಇದೆಲ್ಲದರ ನಡುವೆ ಈ ವಿಚಾರವಾಗಿ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಈ ವಿಚಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮದೇ ಮಾತುಗಳಲ್ಲಿ ಕಿಚ್ಚ ಸುದೀಪ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಹೀಗಿರುವಾಗ ವಿಜಯಲಕ್ಷ್ಮಿ ದರ್ಶನವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಾರೆ ಎನ್ನುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ.
ಹೌದು ಕಿಚ್ಚ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಪರೋಕ್ಷವಾಗಿ ಯುದ್ಧ ಶುರುವಾದ ಬೆನ್ನಲ್ಲೇ ಇಬ್ಬರು ನಟರ ಅಭಿಮಾನಿಗಳು ಸಿಕ್ಕಸಿಕ್ಕ ಫೋಟೋ ವಿಡಿಯೋಗಳನ್ನು ಇಟ್ಟುಕೊಂಡು ಬೇಕಾಬಿಟ್ಟಿ ಟ್ರೋಲ್ ಮಾಡುತ್ತಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಥಿಯೇಟರ್ ವಿಸಿಟ್ ಹಾಕಿದ್ದ ವೇಳೆ ಅರಿಶಿಣ-ಕುಂಕುಮವನ್ನು ತೆಗೆದುಕೊಳ್ಳುವುದಕ್ಕೆ ಹಿಂದೇಟು ಹಾಕಿದ್ದರು. ಇದನ್ನೇ ಇಟ್ಟುಕೊಂಡು ಕೆಲವು ಮಂದಿ ವಿಜಯಲಕ್ಷ್ಮಿ ಹಿಂದೂ ಧರ್ಮದ ಮೇಲೆ ನಂಬಿಕೆಯಿಲ್ಲ. ಅವರು ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದಾರೆಂದು ಕೆಲವು ಫೋಟೊಗಳನ್ನು ಶೇರ್ ಮಾಡುತ್ತಿದ್ದಾರೆ.
ಅಸಲಿಗೆ ಈ ವಿಚಾರದ ಹಿನ್ನೆಲೆಯನ್ನು ನೋಡುವುದಾದರೆ ಈಗಾಗಲೇ ತಿಳಿಸಿದಂತೆ ಮಾರ್ಕ್ ಸಿನಿಮಾದ ಫ್ರೀ ರಿಲೀಸ್ ಕಾರ್ಯಕ್ರಮದಲ್ಲಿ ‘ನಾವು ಮಾತಿಗೆ ಬದ್ದ, ನೀವು ಯುದ್ಧಕ್ಕೆ ಸಿದ್ಧವೇ’ ಎನ್ನುವುದರ ಮುಖಾಂತರ ಕಿಚ್ಚ ಸುದೀಪ್ ಯಾರಿಗೋ ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದರು. ಇದು ದರ್ಶನ ಅಭಿಮಾನಿಗಳಿಗೆ ಹೇಳಿದ ಮಾತು ಎಂಬಂತೆ ಅನೇಕರು ಬಿಂಬಿಸಿದ್ದರು. ಅಲ್ಲದೆ ದಾವಣಗೆರೆಯಲ್ಲಿ ಇದಕ್ಕೆ ವಿಜಯಲಕ್ಷ್ಮಿ ದರ್ಶನ್ ಕೂಡ ತಮ್ಮದೇ ದಾಟಿಯಲ್ಲಿ ‘ಕೆಲವರು ದರ್ಶನ್ ಹೊರಗಡೆ ಇದ್ದಾಗ ಸುಮ್ಮನೆ ಇರುತ್ತಾರೆ. ಜೈಲಿಗೆ ಹೋದಾಗ ವೇದಿಕೆ ಮೇಲೆ ಏನೇನು ಮಾತನಾಡುತ್ತಾರೆ’ ಎಂದು ಟಾಂಗ್ ನೀಡಿದ್ದರು. ಇದು ಕಿಚ್ಚ ಸುದೀಪ್ ಅಭಿಮಾನಿಗಳ ಕಣ್ಣು ಕೆಂಪಾಗಿಸಿತ್ತು.
ಹೀಗಾಗಿ ಅವರು ಎಕ್ಸ್ನಲ್ಲಿ ಕೆಲವರು ವಿಜಯಲಕ್ಷ್ಮಿಯವರ ಫೋಟೊಗಳನ್ನು, ವಿಡಿಯೋಗಳನ್ನು ಹಂಚಿಕೊಂಡು ಈ ಕಿತ್ತಾಟಕ್ಕೆ ಬೇರೆ ಆಯಾಮ ಕೊಡುತ್ತಿದ್ದಾರೆ. ಅದರಲ್ಲೂ ಥಿಯೇಟರ್ ವಿಸಿಟ್ ವೇಳೆ ವಿಜಯಲಕ್ಷ್ಮಿ ದರ್ಶನ್ ಅರಿಶಿಣ-ಕುಂಕುಮವನ್ನು ತೆಗೆದುಕೊಳ್ಳುವುದಕ್ಕೆ ಹಿಂದೇಟು ಹಾಕಿದ್ದರು. ಆ ವಿಡಿಯೋವನ್ನು ಶೇರ್ ಮಾಡಿ ಹಿಂದೂ ಧರ್ಮದ ಬಗ್ಗೆ ಗೌರವವಿಲ್ಲ ಎಂದು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಈ ವಿಡಿಯೋಗೆ ಇನ್ನು ಕೆಲವರು ಬೇರೆಯದೇ ಬಣ್ಣ ಬಳಿಯುತ್ತಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಫೋನ್ನ ಬ್ಯಾಕ್ ಕವರ್ನಲ್ಲಿ ಕ್ರಿಶ್ವಿಯನ್ ಧರ್ಮದ ಚಿಹ್ನೆ ಇರುವ ಫೋಟೊವನ್ನು ಶೇರ್ ಮಾಡುತ್ತಿದ್ದಾರೆ. ಈ ಫೋಟೊವನ್ನು ಶೇರ್ ಮಾಡಿ ನೇರವಾಗಿ ವಿಷಯ ಹೇಳದೇ ಹೋದರೂ, ಅವರಿಗೆ ಕ್ರೈಸ್ತ ಧರ್ಮದ ಬಗ್ಗೆ ಒಲವು ಇದೆಯೆಂದು ಸಾಬೀತು ಮಾಡುವುದಕ್ಕೆ ಹೊರಟಂತೆ ಕಾಣುತ್ತಿದೆ. ಸದ್ಯ ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದಕ್ಕೆ ಶುರುವಾಗಿದೆ.
