PF: ಕೇಂದ್ರ ಸರ್ಕಾರವು ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು ಇನ್ನು ಮುಂದೆ ಪಿಎಫ್ ಹಣವನ್ನು ಎಟಿಎಂ ಹಾಗೂ ಯುಪಿಐ ಮುಖಾಂತರವೇ ಪಡೆಯುವಂತೆ ಅವಕಾಶ ಮಾಡಿಕೊಡಲು ಮುಂದಾಗಿದೆ.
ಹೌದು, ಕೇಂದ್ರ ಸರ್ಕಾರವು ಪಿಎಫ್ ಹಣವನ್ನು ಅತ್ಯಂತ ಸುಲಭವಾಗಿ ಪಡೆದುಕೊಳ್ಳುವ ಆಯ್ಕೆಯನ್ನು ಅಭಿವೃದ್ಧಿಪಡಿಸಿದ್ದು, ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಚಂದಾದಾರರು / ಇಪಿಎಫ್ ಹೊಂದಿರುವವರು ತಮ್ಮ ನೌಕರರ ಭವಿಷ್ಯ ನಿಧಿಯನ್ನು (ಇಪಿಎಫ್ ಹಣವನ್ನು) ಎಟಿಎಂ ಮೂಲಕ ಮತ್ತು ಯುಪಿಐ ಮೂಲಕ ಹಿಂಪಡೆಯಲು ಅನುವು ಮಾಡಿಕೊಡುವ ವೈಶಿಷ್ಟ್ಯವನ್ನು ಪರಿಚಯಿಸಲು ಸಜ್ಜಾಗಿದೆ. ಈ ಹೊಸ ನಿಯಮವು ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ. ಇದರಿಂದ ಉದ್ಯೋಗಳು ಇನ್ಮುಂದೆ ಅತ್ಯಂತ ಸರಳವಾಗಿ ಪಿಎಫ್ ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.
ಪ್ರಸ್ತುತ ಹಿಂಪಡೆಯುವಿಕೆಗಳಿಗೆ ವಿಭಿನ್ನ ಫಾರ್ಮ್‌ಗಳ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದು ಅನೇಕ ಸದಸ್ಯರಿಗೆ ತೊಂದರೆಯಾಗುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸಚಿವಾಲಯವು ಇಪಿಎಫ್ ಹಿಂಪಡೆಯುವಿಕೆಯನ್ನು ಸುಲಭಗೊಳಿಸುತ್ತಿದೆ ಎಂದಿದ್ದಾರೆ.
