Home » ಮರ್ಯಾದೆಗೇಡು ಹತ್ಯೆ: ಮತ್ತೆ ಮೂವರ ಬಂಧನ

ಮರ್ಯಾದೆಗೇಡು ಹತ್ಯೆ: ಮತ್ತೆ ಮೂವರ ಬಂಧನ

0 comments

ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮ ದಲ್ಲಿ ಗರ್ಭಿಣಿ ಮಾನ್ಯಾ ಅವರನ್ನು ಅವರ ತಂದೆಯೇ ಕುಟುಂಬದ ಇತರರೊಂದಿಗೆ ಸೇರಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.

ಗುರುಸಿದ್ದಗೌಡ ಪಾಟೀಲ, ಫಕೀರಗೌಡ ಪಾಟೀಲ, ಬಸನಗೌಡ ಬಂಧಿತರು. ಈ ಪಾಟೀಲ ಮರ್ಯಾದೆಗೇಡು ಹತ್ಯೆ ಪ್ರಕರಣ ಸಂಬಂಧ 15ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನುಳಿದ

ಏತನ್ಮಧ್ಯೆ, ಗ್ರಾಮದಲ್ಲಿ ವಿವೇಕಾನಂದ ದೊಡ್ಡಮನಿ ಅವರಿಗೆ ಹಾಗೂ ಕುಟುಂಬ ದವರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡಿರು ವವರನ್ನು ದಾಖಲಿಸಿದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿಯೂ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ.

5 ಲಕ್ಷ ರೂ. ಪರಿಹಾರ: ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ ಸರಕಾರದಿಂದ 5 ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಹೇಳಿದೆ.

You may also like