Home » 2025 ಟಿಇಟಿ ಫಲಿತಾಂಶ ಪ್ರಕಟ

2025 ಟಿಇಟಿ ಫಲಿತಾಂಶ ಪ್ರಕಟ

0 comments
Open Book Exam

ಬೆಂಗಳೂರು: 2025ನೇ ಸಾಲಿನ ಟಿಇಟಿ ಪರೀಕ್ಷೆ ಫಲಿತಾಂಶವನ್ನು ಶಾಲಾ ಶಿಕ್ಷಣ ಇಲಾಖೆ ಮಂಗಳವಾರ ಪ್ರಕಟಿಸಿದೆ. ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್ http://sts.kar-nataka.gov.in/ ಗೆ ಭೇಟಿ ನೀಡುವ ಮೂಲಕ ಫಲಿತಾಂಶ ಪಡೆಯಬಹುದಾಗಿದೆ. ಟಿಇಟಿ ಫಲಿತಾಂಶದ ಜತೆಗೆ ಎಲ್ಲಾ ವಿಷಯಗಳ ಅಂತಿಮ ಉತ್ತರಗಳನ್ನು ಕೂಡ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಡಿ.7ರಂದು ನಡೆದಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಎರಡು ಅವಧಿಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.

ಟಿಇಟಿಗೆ ಅರ್ಜಿ ಸಲ್ಲಿಸಿದ್ದ 2.50 ಲಕ್ಷ ಅಭ್ಯರ್ಥಿಗಳ ಪೈಕಿ 2.37 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

You may also like