10
ವಿಟ್ಲ (ದ.ಕ.): ಪಾಸ್‌ಪೋರ್ಟ್ ಪರಿಶೀಲನೆಯ ನಕಲಿ ವರದಿ ಮತ್ತು ಅಧಿಕಾರಿಯ ಸಹಿ ಫೋರ್ಜರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಟ್ಲ ಪೊಲೀಸ್ ಠಾಣೆ ಸಿಬ್ಬಂದಿ ಪ್ರದೀಪ್ ಅವರನ್ನು ಬಂಧಿಸಲಾಗಿದೆ.
ಶಕ್ತಿದಾಸ್ ಎಂಬುವರು ಜೂನ್‌ನಲ್ಲಿ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಬೀಟ್ ಸಿಬ್ಬಂದಿ ಸಾಬು ಮಿರ್ಜಿಗೆ ತಿಳಿಸದೇ ಅವರ ಹೆಸರಲ್ಲೇ ಸಿಬ್ಬಂದಿ ಪ್ರದೀಪ್ ವರದಿ ತಯಾರಿಸಿದ್ದರು. ಮೇಲಧಿಕಾರಿಗಳಿಂದ ಶಿಫಾರಸು ಮಾಡಿಸಿದ ಬಳಿಕ ಪರಿಶೀಲನಾ ದಾಖಲೆಗಳನ್ನು ನಾಶ ಮಾಡಿದ್ದರು.
