ತಿರುವನಂತಪುರ: ಕೇರಳದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪೂರ್ಣಗೊಳಿಸಿರುವ ಚುನಾವಣಾ ಆಯೋಗ, ಮಂಗಳವಾರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ರಾಜ್ಯದಲ್ಲಿ ವಿವಿಧ ಕಾರಣಗಳಿಂದ ಒಟ್ಟು 24 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಆಯೋಗ ಕೈ ಬಿಟ್ಟಿದೆ.
ಈ ಪೈಕಿ 6,49,885 ಹೆಸರುಗಳನ್ನು ಮತದಾರರ ಸಾವು: 6,43,548 ಹೆಸರುಗಳನ್ನು ಮತದಾರರು ನಾಪತ್ತೆ: 8,16,221 ಹೆಸರುಗಳನ್ನು ಮತದಾರ ಶಾಶ್ವತ ವಲಸೆ ಹಾಗೂ 1,36,029 ಹೆಸರುಗಳನ್ನು ಒಂದಕ್ಕಿಂತ ಹೆಚ್ಚು ಕಡೆ ನೋಂದಣಿ ಕಾರಣದಡಿ ಡಿಲೀಟ್ ಮಾಡಲಾಗಿದೆ. ಮುಖ್ಯ ಚುನಾವಣಾ ಅಧಿಕಾರಿ ರತನ್ ಯು ಕೇಲ್ಕರ್ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.
ಪರಿಷ್ಕರಣೆ ಬಳಿಕ ರಾಜ್ಯದ ಒಟ್ಟು ಮತದಾರರ ಸಂಖ್ಯೆ 2 ಕೋಟಿ 54 ಲಕ್ಷಕ್ಷೆ ಇಳಿದಿದೆ. ‘ಎಸ್ ಐಆರ್’ಗೆ ಮುನ್ನ ಮತದಾರರ ಪಟ್ಟಿಯಲ್ಲಿ 2 ಕೋಟಿ 78 ಲಕ್ಷ ಹೆಸರುಗಳಿದ್ದವು
