Gujarat : ಗುಜರಾತ್ ನಲ್ಲಿ ಮೈತುಂಬ ಅಹಂಕಾರ ತುಂಬಿರುವ ಉದ್ಯಮಿ ಒಬ್ಬ ಮಾರ್ಗದ ಮಧ್ಯೆ ವಾಹನಗಳನ್ನು ತಡೆದು ತನ್ನ ಮಗನ ಬರ್ತಡೇ ಯನ್ನು ಆಚರಿಸಿ ದರ್ಪದ ಮಾತನಾಡಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ಕಂಡು ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು, ಗುಜರಾತ್ ರಾಜ್ಯದ ಸೂರತ್ನ ಡುಮಾಸ್ ಎಂಬಲ್ಲಿ ಸ್ಥಳೀಯ ಉದ್ಯಮಿ ದೀಪಕ್ ಇಜರ್ದಾರ್ ತಮ್ಮ ಮಗನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಾರ್ವಜನಿಕ ರಸ್ತೆಯನ್ನು ಬಳಸಿಕೊಂಡಿದ್ದಾನೆ. ಅಲ್ಲದೆ ವಾಹನಗಳನ್ನು ತಡೆದು ರಸ್ತೆಯ ನಡುವಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸಿ ವಾಹನ ಚಾಲಕರಿಗೆ ತೊಂದರೆ ಉಂಟುಮಾಡಿದ್ದಾನೆ.
ರಸ್ತೆ ಮಧ್ಯೆ ತಡೆದು ನಿಲ್ಲಿಸಿ ಪಟಾಕಿ ಹಚ್ಚುತ್ತಿರುವುದನ್ನು ಸಾರ್ವಜನಿಕರು ಪ್ರಶ್ನಿಸಿದಾಗ ಪಟಾಕಿ ಹಚ್ಚಿ ಅದನ್ನು ಕಾರಿನ ಚಾಲಕರೊಬ್ಬರಿಗೆ ಸಿಟ್ಟಿನಿಂದ ತೋರಿಸಿದ್ದಾನೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಜರ್ದಾರ್ ಟ್ರಾಫಿಕ್ ಜಾಮ್ ಉಂಟುಮಾಡಿದ್ದಲ್ಲದೆ, ಹತಾಶೆ ವ್ಯಕ್ತಪಡಿಸಿದ ವಾಹನ ಚಾಲಕರ ಕಡೆಗೆ ಉದ್ದೇಶಪೂರ್ವಕವಾಗಿ ಪಟಾಕಿಗಳನ್ನು ತೋರಿಸುತ್ತಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದ್ದಕ್ಕೆ ದೀಪಕ್ ಇಜರ್ದಾರ್, ನಾನು ಸೆಲೆಬ್ರಿಟಿ. ನಾನು ನಿಮ್ಮನ್ನು ಐದು ನಿಮಿಷಗಳ ಕಾಲ ನಿಲ್ಲಿಸಿದರೆ ಏನು ಗಂಭೀರ ಅಪರಾಧ ಮಾಡಿದೆ?” ಎಂದು ಉಡಾಫೆ ಮಾತುಗಳನ್ನು ಹೇಳಿದ್ದಾರೆ.
