Home » Ganga Kalyana : ಬೋರ್ವೆಲ್ ಕೊರೆಸಲು ಸರ್ಕಾರದಿಂದ 4 ಲಕ್ಷ ಸಬ್ಸಿಡಿ ಘೋಷಣೆ – ಅರ್ಜಿ ಸಲ್ಲಿಕೆ ಹೇಗೆ?

Ganga Kalyana : ಬೋರ್ವೆಲ್ ಕೊರೆಸಲು ಸರ್ಕಾರದಿಂದ 4 ಲಕ್ಷ ಸಬ್ಸಿಡಿ ಘೋಷಣೆ – ಅರ್ಜಿ ಸಲ್ಲಿಕೆ ಹೇಗೆ?

0 comments

Ganga kalyana: ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಸಕಲ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ. ರೈತರು ಕೂಡ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಅಂತೆಯೇ ಇದೀಗ ಸರ್ಕಾರ ಉಚಿತವಾಗಿ ಬೊರ್ವೆಲ್ ಕೊರೆಸಿ, ಎಲ್ಲಾ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನು ಜಾರಿಗೊಳಿಸಿದೆ. ಇದುವೇ ಗಂಗಾ ಕಲ್ಯಾಣ ಯೋಜನೆ. ಈ ಯೋಜನೆ ಅಡಿ ಸರ್ಕಾರ ರೈತರಿಗೆ ಬರೋಬ್ಬರಿ ನಾಲ್ಕು ಲಕ್ಷ ರೂಪಾಯಿ ಸಬ್ಸಿಡಿಯನ್ನು ನೀಡುತ್ತಿದೆ.

ಹೌದು, ಕೃಷಿ ಭೂಮಿಯಲ್ಲಿ ರೈತರಿಗೆ ತುಂಬಾ ಅಗತ್ಯವಾಗಿ ಬೇಕಾಗಿರುವುದು ನೀರು. ಕೆರೆ, ಬಾವಿ, ನದಿ, ಹೊಳೆಗಳಿದ್ದವರಿಗೆ ಇದು ಸುಲಭದಲ್ಲಿ ಸಿಗುತ್ತದೆ. ಆದರೆ ಉಳಿದವರಿಗೆ ಬೊರ್ವೆಲ್ ಅನ್ನು ಅರಸಬೇಕು. ಆದರೆ ಒಂದು ಬೊರ್ವೆಲ್ ತೆಗೆಸಿ, ಪಂಪ್ ಇಳಿಸಿ, ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುವಾಗ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಆದರೆ ರೈತರಿಗೆ ಇಷ್ಟು ವ್ಯಯಿಸುವ ಶಕ್ತಿ ಇರುವುದಿಲ್ಲ. ಹೀಗಾಗಿ ಇಂಥ ರೈತರಿಗೆ ನೆರವಾಗಲು ಸರ್ಕಾರ ಮುಂದಾಗಿದ್ದು, ಉಚಿತವಾಗಿ ಬೊರ್ವೆಲ್ ಕೊರೆಸಲು 2024-25ನೇ ಸಾಲಿಗೆ ಗಂಗಾ ಕಲ್ಯಾಣ ಯೋಜನೆಯಡಿ ಪರಿಶಿಷ್ಟ ಜಾತಿ ವರ್ಗದ ರೈತರು ತಮ್ಮ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಸಿರುವ ರೈತರಿಗೆ ಸಹಾಯಧನ ನೀಡಲಾಗುತ್ತಿದ್ದು, ಸರ್ಕಾರವು ನಾಲ್ಕು ಲಕ್ಷ ರೂಪಾಯಿಯ ಸಬ್ಸಿಡಿಯನ್ನು ಘೋಷಿಸಿದೆ. ಇದಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

 ಯಾರು ಅರ್ಜಿ ಸಲ್ಲಿಸಬಹುದು?

ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಯ (ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಮರಾಠ ಮತ್ತು ಅದರ ಉಪಸಮುದಾಯಗಳನ್ನು ಹೊರತುಪಡಿಸಿ) ಉಳಿದ ಸಮುದಾಯಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆ ಜೋಡಣೆ ಮಾಡಿಕೊಂಡಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿರಬೇಕು. ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಸೌಲಭ್ಯ ಲಭ್ಯವಿರುತ್ತದೆ. ಈಗಾಗಲೇ ನಿಗಮದ ಯಾವುದಾದರೂ ಯೋಜನೆಯ ಪ್ರಯೋಜನ ಪಡೆದವರು ಹಾಗೂ ಅವರ ಕುಟುಂಬದ ಸದಸ್ಯರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅರ್ಹರಲ್ಲ. 

ಅರ್ಜಿ ಸಲ್ಲಿಸಲು ಈ ದಾಖಲೆಗಳು :

ರೈತರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು.

ಆಧಾರ್ ಕಾರ್ಡ್

ಬ್ಯಾಂಕ್ ಪಾಸ್ ಬುಕ್

ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ಸ್ವಂತ ಜಮೀನಿನ ಪಹಣಿ

ಅರ್ಜಿದಾರರ ಭಾವಚಿತ್ರ

ಬಿಪಿಎಲ್ ರೇಷನ್ ಕಾರ್ಡ್

ಮೊಬೈಲ್ ಸಂಖ್ಯೆ

ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ

ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು.

ಹಾಲಿ ಜಮೀನುಗಳು ಕೃಷಿ ಚಟುವಟಿಕೆಯಲ್ಲಿರಬೇಕು.

ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿರಬಾರದು.

ಫಲಾನುಭವಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

ವಯಸ್ಸು 18 ರಿಂದ 60 ವರ್ಷದೊಳಗಿರಬೇಕು.

ಕುಟುಂಬ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ. 98 ಸಾವಿರ ಹಾಗೂ ಪಟ್ಟಣ ಪ್ರದೇಶದವರಿಗೆ ರೂ. 1.20 ಲಕ್ಷಗಳು ಒಳಗಿರಬೇಕು.

ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಕನಿಷ್ಠ 02 ಎಕರೆ ಜಮೀನು ಹೊಂದಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿದಾರರು ಸೇವಾಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸೆ.15 ರೊಳಗಾಗಿ ಸಲ್ಲಿಸಬಹುದು.

You may also like