Home » ಕೇರಳ: ರೈಲ್ವೆ ಟ್ರ್ಯಾಕ್‌ ಮೇಲೆ ಆಟೋ ನಿಲ್ಲಿಸಿ ಹೋದ ಚಾಲಕ, ರೈಲು ಡಿಕ್ಕಿ

ಕೇರಳ: ರೈಲ್ವೆ ಟ್ರ್ಯಾಕ್‌ ಮೇಲೆ ಆಟೋ ನಿಲ್ಲಿಸಿ ಹೋದ ಚಾಲಕ, ರೈಲು ಡಿಕ್ಕಿ

0 comments

ತಿರುವನಂತಪುರ: ಕುಡಿದ ಮತ್ತಿನಲ್ಲಿ ಚಾಲಕನೋರ್ವ ಆಟೋವನ್ನು ರೈಲ್ವೆ ಹಳಿ ಮೇಲೆ ನಿಲ್ಲಿಸಿದ ಘಟನೆ ನಡೆದಿದೆ. ಇದರ ಪರಿಣಾಮ ರಿಕ್ಷಾಗೆ ವಂದೇ ಭಾರತ್‌ ರೈಲು ಡಿಕ್ಕಿ ಹೊಡೆದಿದೆ. ಈ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ತಿರುವನಂತಪುರಂ ಜಿಲ್ಲೆಯ ಅಕತುಮುರಿ ನಿಲ್ದಾಣದ ಬಳಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಲೋಕೋ ಪೈಲೆಟ್‌ ರೈಲ್ವೆ ಹಳಿ ಮೇಲೆ ಆಟೋ ನಿಂತಿರುವುದನ್ನು ರಾತ್ರಿ ಸಮಯ ಕಂಡಿದ್ದು, ಬ್ರೇಕ್‌ ಹಾಕಿದ್ದಾರೆ. ಆದರೂ ರೈಲಿನ ಮುಂಭಾಗ ಆಟೋಗೆ ತಾಗಿದೆ.

ರಾತ್ರಿ 10.10 ರ ಸುಮಾರಿಗೆ ವರ್ಕಲಾ-ಕಡಕ್ಕಾವೂರು ವಿಭಾಗದ ಅಕತುಮುರಿಗೆ ರೈಲು ಬಂದಾಗ ಲೋಕೋ ಪೈಲಟ್‌ಗೆ ವಾಹನವೊಂದು ಹಳಿ ಮೇಲೆ ಇರುವುದು ಕಂಡಿದೆ. ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ, ಎಂಜಿನಿಯರಿಂಗ್‌ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಬಂದಿದ್ದು ನೋಡಿದಾಗ ಆಟೋದೊಳಗೆ ಯಾರೂ ಇರಲಿಲ್ಲ.

ಆಟೋರಿಕ್ಷಾ ಚಾಲಕ ಸುಧಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆ ಸಮಯದಲ್ಲಿ ಆತ ಮದ್ಯದ ಅಮಲಿನಲ್ಲಿದ್ದನೆಂದು ಶಂಕಿಸಲಾಗಿದೆ.

You may also like