Home » Vijayalakshmi Darshan: ವಿಕೋಪಕ್ಕೆ ತಿರುಗಿದ ಸ್ಟಾರ್‌ ವಾರ್‌: 15 ಖಾತೆ, 150 ಪೋಸ್ಟ್‌ ವಿರುದ್ಧ ವಿಜಯಲಕ್ಷ್ಮಿ ದೂರು

Vijayalakshmi Darshan: ವಿಕೋಪಕ್ಕೆ ತಿರುಗಿದ ಸ್ಟಾರ್‌ ವಾರ್‌: 15 ಖಾತೆ, 150 ಪೋಸ್ಟ್‌ ವಿರುದ್ಧ ವಿಜಯಲಕ್ಷ್ಮಿ ದೂರು

0 comments

Vijayalakshmi Darshan: ಸಾಮಾಜಿಕ ಜಾಲತಾಣದಲ್ಲಿ (Social Media) ತನ್ನ ವಿರುದ್ಧ ಕೆಟ್ಟ ಕಮೆಂಟ್‌ ಪೋಸ್ಟ್‌ ಮಾಡಿದ ಖಾತೆಗಳ ವಿರುದ್ದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಸೈಬರ್‌ ಕ್ರೈಂ (Cyber Crime) ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.ದರ್ಶನ್ ಇದ್ದಾಗ ಯಾರೂ ಮಾತನಾಡುತ್ತಿರಲಿಲ್ಲ.

ಈಗ ವೇದಿಕೆ, ಟಿವಿ ಚಾನೆಲ್‌ಗಳಲ್ಲಿ ಮಾತನಾಡುತ್ತಾರೆ. ದರ್ಶನ್ ಇದ್ದಾಗ ಇವರೆಲ್ಲಾ ಇದ್ರೋ? ಇರಲಿಲ್ವೋ ಎಂದು ಪ್ರಶ್ನಿಸಿ ದಾವಣಗೆರೆಯಲ್ಲಿ ವಿಜಯಲಕ್ಷ್ಮಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ನೀಡಿದ ಬಳಿಕ ವಿಜಯಲಕ್ಷ್ಮಿ ಅವರ ವಿರುದ್ಧ ನಿಂದನೆಗಳ ಪೋಸ್ಟ್‌ ಪ್ರಕಟವಾಗುತ್ತಿದೆ. ನಿಂದನೆಯ ವಿರುದ್ಧ ಸಿಡಿದ ವಿಜಯಲಕ್ಷ್ಮಿ 15 ಇನ್‌ಸ್ಟಾಗ್ರಾಂ ಐಡಿ ಮತ್ತು 150ಕ್ಕೂ ಹೆಚ್ಚು ಕೆಟ್ಟ ಕಮೆಂಟ್‌ ವಿರುದ್ಧ ಫೋಟೋ ಸಮೇತ ದೂರು ದೂರು ನೀಡಿದ್ದಾರೆ.ದೂರು ನೀಡಿದ ಬಳಿಕ ಮಾಧ್ಯಮಗಳು ವಿಜಯಲಕ್ಷ್ಮಿ ಅವರನ್ನು ಮಾತನಾಡಲು ಪ್ರಯತ್ನಿಸಿದವು. ಆದರೆ ವಿಜಯಲಕ್ಷ್ಮಿ ಯಾವುದೇ ಪ್ರತಿಕ್ರಿಯೆ ನೀಡದೇ ಕಾರು ಹತ್ತಿ ತೆರಳಿದರು.

You may also like