DK Shivkumar : ರಾಜ್ಯದಲ್ಲಿ ಮುಖ್ಯಮಂತ್ರಿ ಖುರ್ಚಿ ವಿಚಾರ ಜೋರಾಗಿ ಸದ್ದು ಮಾಡಿದ್ದು ಈಗ ದಿಡೀರ್ ಎಂದು ತಣ್ಣಗಾಗುತ್ತಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಈ ಕುರಿತಾದ ಮುಸುಕಿನ ಗುದ್ದಾಟ ನಡೆದಿದ್ದು ರಾಜ್ಯಾದ್ಯಂತ ಜೋರಾಗಿ ಸದ್ದು ಮಾಡಿತ್ತು. ಆದರೆ ಇದೀಗ ಡಿಕೆ ಶಿವಕುಮಾರ್ ಅವರು ಇದರಿಂದ ಹಿಂದೆ ಸರಿದಿದ್ದಾರೆ. ಯಾಕೆಂದರೆ ಡಿಕೆ ಶಿವಕುಮಾರ್ ಅವರು ಆಡಿರುವಂತಹ ಮಾತುಗಳು ಇದಕ್ಕೆ ಪುಷ್ಠಿ ನೀಡುತ್ತಿವೆ.
ಯಸ್, ದೆಹಲಿಗೆ ಹೈಕಮಾಂಡ್ ಭೇಟಿಗಾಗಿ ತೆರಳಿದ ಡಿಕೆ ಶಿವಕುಮಾರ್ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುವಾಗ ಅಡ್ಡಗೋಡೆಯ ಮೇಲೆ ದೀಪ ವಿಟ್ಟಂತೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ನನಗೆ ಉಪಮುಖ್ಯಮಂತ್ರಿ ಸ್ಥಾನ ತೃಪ್ತಿಯನ್ನು ತಂದಿದೆ. ಹೀಗಾಗಿ ಸಾಮಾನ್ಯ ಕಾರ್ಯಕರ್ತನಾಗಿ ಅದರಲ್ಲಿಯೇ ಮುಂದುವರೆಯುತ್ತೇನೆ. ಸಿಎಂ ಕುರ್ಚಿ ಕುರಿತು ಯಾವುದೇ ವಿವಾದವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಅವರು ವೈರಾಗ್ಯದ ಮಾತುಗಳನ್ನ ಆಡಿಸುತ್ತಿದ್ದಾರೆ ಎಂದೆಲ್ಲ ಬಣ್ಣಿಸಲಾಗುತ್ತದೆ..
ಈ ಮಧ್ಯೆ ಮಾಧ್ಯಮಗಳ ಪುನರಾವರ್ತಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಯಾವುದೇ ಹೆಸರನ್ನು ಊಹಾಪೋಹ ಮಾಡಬಾರದು. ನಾಯಕತ್ವಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟದ್ದು, ಯಾವುದೇ ದಿನವಾದರೂ ಕಾಂಗ್ರೆಸ್ ಪಕ್ಷ ನಿರ್ಧಾರ ತೆಗೆದುಕೊಳ್ಳಬಹುದು. ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದರು.
