Home » ಸ್ವಂತ ಕಾರಿಗೆ ʼಪೊಲೀಸ್‌ʼ ಬೋರ್ಡ್‌ ಹಾಕಿ ಧರ್ಮಸ್ಥಳಕ್ಕೆ ಪ್ರವಾಸ: ಪೊಲೀಸ್‌ಗೆ ದಂಡ ಹಾಕಿದ ಲೇಡಿ ಪೊಲೀಸ್

ಸ್ವಂತ ಕಾರಿಗೆ ʼಪೊಲೀಸ್‌ʼ ಬೋರ್ಡ್‌ ಹಾಕಿ ಧರ್ಮಸ್ಥಳಕ್ಕೆ ಪ್ರವಾಸ: ಪೊಲೀಸ್‌ಗೆ ದಂಡ ಹಾಕಿದ ಲೇಡಿ ಪೊಲೀಸ್

0 comments

ಧಾರವಾಡ: ಮೂಲದ ಪೊಲೀಸ್‌ ಅಧಿಕಾರಿಯೊಬ್ಬರು ತಮ್ಮ ಕುಟುಂಬದ ಸದಸ್ಯರ ಜೊತೆ ತಮ್ಮ ಸ್ವಂತ ಕಾರಿನಲ್ಲಿ ಧರ್ಮಸ್ಥಳಕ್ಕೆ ಪ್ರವಾಸ ಹೊರಟಿದ್ದರು. ತಮ್ಮ ಖಾಸಗಿ ಕಾರಿನ ಮೇಲೆ ʼಪೊಲೀಸ್‌ʼ ಎಂಬ ನಾಮಫಲಕವನ್ನು ಅಳವಡಿಸಿಕೊಂಡಿದ್ದರು. ಈ ಕಾರು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್‌ ಪೋಸ್ಟ್‌ ತಲುಪಿದಾಗ ವಿಷಯ ಬಹಿರಂಗವಾಗಿದೆ.

ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಬಣಕಲ್‌ ಪಿಎಸೈ ರೇಣುಕಾ ಅವರು ಕಾರನ್ನು ತಡೆದು ನಿಲ್ಲಿಸಿದ್ದು, ಈ ವೇಳೆ ಕಾರಿನಲ್ಲಿದ್ದವರು ತಾವು ಪೊಲೀಸ್‌ ಇಲಾಖೆಯವರು ಎಂದು ಹೇಳಿ ಗುರುತಿನ ಚೀಟಿಯನ್ನು ತೋರಿಸಿದ್ದು, ಆದರೆ ಖಾಸಗಿ ವಾಹನದ ಮೇಲೆ ಇಲಾಖೆಯ ಬೋರ್ಡ್‌ ಹಾಕುವುದು ನಿಯಮಬಾಹಿರ ಎಂದು ಪಿಎಸ್‌ಐ ರೇಣುಕಾ ಖಡಕ್‌ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಪಿಎಸ್‌ಐ ಸ್ಥಳದಲ್ಲಿಯೇ ದಂಡ ವಿಧಿಸಿದ್ದಾರೆ. ಕಾರಿನ ಮೇಲಿದ್ದ ʼಪೊಲೀಸ್‌ʼ ಬೋರ್ಡನ್ನು ತಕ್ಷಣವೇ ತೆರವು ಮಾಡಿದ ನಂತರ ವಾಹನವನ್ನು ಮುಂದಕ್ಕೆ ಹೋಗಲು ಅನುಮತಿ ನೀಡಿದ್ದಾರೆ.

You may also like