ಬೆಂಗಳೂರು: ಅರ್ಧದಲ್ಲೇ ಹನಿಮೂನ್ನಿಂದ ವಾಪಸ್ಸಾಗಿ ಆತ್ಮಹತ್ಯೆಗೆ ಯತ್ನ ಮಾಡಿದ್ದ ನವವಧು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.
ಮೃತ ನವವಧುವನ್ನು ಗಾನವಿ (26) ಎಂದು ಗುರುತಿಸಲಾಗಿದೆ. ಅ.29 ರಂದು ಮೃತ ಗಾನವಿ ಹಾಗೂ ಸೂರಜ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಪ್ಯಾಲೇಸ್ ಗ್ರೌಂಡ್ನಲ್ಲಿ ಅದ್ಧೂರಿಯಾಗಿ ರಿಸೆಪ್ಶನ್ ಮಾಡಿಕೊಂಡಿದ್ದರು. ಹತ್ತು ದಿನಗಳ ಹಿಂದೆ ಶ್ರೀಲಂಕಾಗೆ ಹನಿಮೂನ್ಗೆ ಹೋಗಿದ್ದರು. ಭಾನುವಾರ (ಡಿ.21) ಹನಿಮೂನ್ ಮುಗಿಸದೇ ಅರ್ಧಕ್ಕೆ ಶ್ರೀಲಂಕಾದಿಂದ ಇಬ್ಬರು ವಾಪಾಸಾಗಿದ್ದರು.
ಜಗಳವಾಗಿದ್ದರು ಗಾನವಿ ಮನೆಯವರು ಆಕೆಯನ್ನು ಮನೆಗೆ ಕರೆ ತಂದಿದ್ದರು. ಡಿ.23 ಮಧ್ಯಾಹ್ನ ಹೊತ್ತಿಗೆ ಗಾನವಿ ಆತ್ಮಹತ್ಯೆಗೆ ಯತ್ನ ಮಾಡಿದ್ದರು. ರಕ್ಷಣೆಗೆ ಬಂದ ಮನೆಯವರು ಆಕೆಯನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.
ನಿನ್ನೆ ವೈದ್ಯರು ಬ್ರೈನ್ ಡೆಡ್ ಆಗಿದೆ ಎಂದು ಹೇಳಿದ್ದು, ವೆಂಟಿಲೇಟರ್ನಲ್ಲಿ ಇಟ್ಟಿದ್ದರು. ಡಿ.25 ರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.
ಸದ್ಯಕ್ಕೆ ಗಾನವಿ ಕುಟುಂಬದವರು ಸೂರಜ್ ಕುಟುಂಬದವರ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ವರದಕ್ಷಿಣೆ ಕಿರುಕುಳ, ಆತ್ಮಹ್ಯತ್ಯೆಗೆ ಪ್ರಚೋದನ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
