Home » ಉಡುಪಿ: ನೇಮೋತ್ಸವದಲ್ಲಿ ವೃದ್ಧೆಯ ಚಿನ್ನದ ಸರ ಕಳ್ಳತನ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಉಡುಪಿ: ನೇಮೋತ್ಸವದಲ್ಲಿ ವೃದ್ಧೆಯ ಚಿನ್ನದ ಸರ ಕಳ್ಳತನ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

0 comments
Crime

ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಗರಡಿಯಲ್ಲಿ ಶ್ರೀಬ್ರಹ್ಮಬೈದರ್ಕಳ ಗರಡಿ ನೇಮೋತ್ಸವದ ಸಂದರ್ಭದಲ್ಲಿ ವೃದ್ಧೆಯೊಬ್ಬರ ಚಿನ್ನದ ಸರವನ್ನು ಕಳ್ಳಿಯರು ಲಪಟಾಯಿಸಿದ್ದಾರೆ.

ಸಿಸಿ ಕ್ಯಾಮೆರಾದಲ್ಲಿ ಮೂವರು ಕಳ್ಳಿಯರ ಕರಾಮತ್ತು ಸೆರೆಯಾಗಿದೆ. ವೃದ್ಧೆಯನ್ನು ಮೂರು ಕಡೆಯಿಂದ ಸುತ್ತುವರಿದು ಚಿನ್ನದ ಸರ ಕದ್ದಿದ್ದಾರೆ. ಹೆಜಮಾಡಿ ನಿವಾಸಿ ಕಮಲ ಎಂಬುವವರ ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಪೂಜೆಯ ಸಂದರ್ಭದಲ್ಲಿ ಮೂವರು ಕಳ್ಳಿಯರು ಗಂಟೆ ಹೊಡೆಯುವ ನೆಪದಲ್ಲಿ ಕದ್ದಿದ್ದಾರೆ.

2 ಲಕ್ಷ ಮೌಲ್ಯದ ಚಿನ್ನದ ಸರ ಎಂದು ಹೇಳಲಾಗಿದೆ. ಇದೀಗ ಆ ಮೂವರು ಕಳ್ಳಿಯರ ಪತ್ತೆಗೆ ಪಡುಬಿದ್ರಿ ಪೊಲೀಸರು ಬಲೆ ಬೀಸಿದ್ದಾರೆ.

You may also like