Home » Car book: ಕಾರು ಬುಕ್‌ ಮಾಡುವಾಗಲೇ ಟಿಪ್ಸ್‌ ಕೇಳುವುದಕ್ಕೆ ನಿಷೇಧ!

Car book: ಕಾರು ಬುಕ್‌ ಮಾಡುವಾಗಲೇ ಟಿಪ್ಸ್‌ ಕೇಳುವುದಕ್ಕೆ ನಿಷೇಧ!

0 comments
Ola Premium Plus Service

Car book: ಓಲಾ, ಉಬರ್‌ ಸೇರಿ ಕ್ಯಾಬ್‌, ಆಟೋ ಬುಕಿಂಗ್‌ ಆ್ಯಪ್‌ಗಳಲ್ಲಿ ಪ್ರಯಾಣ ಶುರುವಾಗುವ ಮುನ್ನವೇ ಟಿಪ್ಸ್‌ ಕೇಳುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ತಡೆ ನೀಡಿದೆ.

ಆ್ಯಪ್‌ಗಳಲ್ಲಿ ಟಿಪ್ಸ್‌ ಕೇಳುವ ಪದ್ಧತಿ ಬಗ್ಗೆ ಕೆಲ ತಿಂಗಳ ಹಿಂದೆ ಬಳಕೆದಾರರು ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ದೂರಿತ್ತಿದ್ದರು. ಅದರ ಬೆನ್ನಲ್ಲೇ, ಈಗ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಶಿಫಾರಸ್ಸಿನ ಮೇಲೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಆ್ಯಪ್‌ಗಳ ಕಾನೂನಿಗೆ ತಿದ್ದುಪಡಿ ತಂದಿದೆ.

ಈ ಆದೇಶದ ಅನ್ವಯ, ಗ್ರಾಹಕರು ಆಟೋ /ಕ್ಯಾಬ್‌/ಬೈಕ್‌ ಬುಕ್‌ ಮಾಡುವ ಮುನ್ನ ಟಿಪ್ಸ್‌ ಕೇಳುವಂತಿಲ್ಲ. ಪ್ರಯಾಣ ಮುಗಿದ ಬಳಿಕವಷ್ಟೇ ಟಿಪ್ಸ್‌ ಆಯ್ಕೆ ಇಡಬಹುದು. ಈ ಮೊತ್ತಕ್ಕೆ ಆ್ಯಪ್‌ಗಳು ಯಾವುದೇ ಕತ್ತರಿ ಹಾಕದೆ, ಚಾಲಕರಿಗೇ ಸಂಪೂರ್ಣ ಹಣ ಕೊಡಬೇಕು ಎಂದು ಸೂಚಿಸಲಾಗಿದೆ. ಈ ಎಲ್ಲ ನಿಯಮಗಳನ್ನು ಜಾರಿಗೊಳಿಸುವಂತೆ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.

ಇನ್ನು ಮಹಿಳೆಯರ ಸುರಕ್ಷತೆಗಾಗಿ ‘ಕಡ್ಡಾಯ ಮಹಿಳಾ ಚಾಲಕ’ ಆಯ್ಕೆಯನ್ನು ಆ್ಯಪ್‌ಗಳು ಕೊಡಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

You may also like