Home » ಪುತ್ತೂರಿನಿಂದ ಮುಳ್ಳಯ್ಯನಗಿರಿಗೆ ಟ್ರಿಪ್‌ ಹೋದವರ ಜೀಪ್‌ ಪಲ್ಟಿ: 7 ಮಂದಿಗೆ ಗಾಯ

ಪುತ್ತೂರಿನಿಂದ ಮುಳ್ಳಯ್ಯನಗಿರಿಗೆ ಟ್ರಿಪ್‌ ಹೋದವರ ಜೀಪ್‌ ಪಲ್ಟಿ: 7 ಮಂದಿಗೆ ಗಾಯ

0 comments

ಚಿಕ್ಕಮಗಳೂರು: ಪುತ್ತೂರಿನಿಂದ ಮುಳ್ಳಯ್ಯನಗಿರಿಗೆ ಟ್ರಿಪ್‌ ಹೋಗಿದ್ದವರ ಜೀಪ್‌ ಪಲ್ಟಿಯಾಗಿದ್ದು, ಏಳು ಜನರಿಗೆ ಗಾಯವಾಗಿರುವ ಕುರಿತು ವರದಿಯಾಗಿದೆ.ಚಿಕ್ಕಮಗಳೂರು: ಪುತ್ತೂರಿನಿಂದ ಮುಳ್ಳಯ್ಯನಗಿರಿಗೆ ಟ್ರಿಪ್‌ ಹೋಗಿದ್ದವರ ಜೀಪ್‌ ಪಲ್ಟಿಯಾಗಿದ್ದು, ಏಳು ಜನರಿಗೆ ಗಾಯವಾಗಿರುವ ಕುರಿತು ವರದಿಯಾಗಿದೆ.

ಈ ಘಟನೆ ಮುಳ್ಳಯ್ಯನಗಿರಿ ಮಾರ್ಗದ ತಿಪ್ಪನಹಳ್ಳಿ ಎಸ್ಟೇಟ್‌ ಬಳಿ ನಡೆದಿದೆ.

ಪುತ್ತೂರಿನಿಂದ ಜೀಪ್‌ನಲ್ಲಿಯೇ ಆಗಮಿಸಿದ್ದ 7 ಮಂದಿ ಮುಳ್ಳಯ್ಯನಗಿರಿಗೆ ಬಂದಿದ್ದರು. ಈ ವೇಳೆ ಅಪಘಾತವಾಗಿದೆ. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನು ರವಾನೆ ಮಾಡಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಜೀಪ್‌ ಪಲ್ಟಿಯಾಗಿದೆ ಎನ್ನಲಾಗಿದೆ. ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like