Home » ಹೆರಿಗೆ ವೇಳೆ ಶಿಶುವಿನ ತಲೆಗೆ ಕತ್ತರಿ ತಾಗಿಸಿ ಗಾಯ ಮಾಡಿದ ವೈದ್ಯರು; ಆಕ್ರೋಶಗೊಂಡ ಪೋಷಕರು

ಹೆರಿಗೆ ವೇಳೆ ಶಿಶುವಿನ ತಲೆಗೆ ಕತ್ತರಿ ತಾಗಿಸಿ ಗಾಯ ಮಾಡಿದ ವೈದ್ಯರು; ಆಕ್ರೋಶಗೊಂಡ ಪೋಷಕರು

0 comments

ಹಾವೇರಿಯ ಜಿಲ್ಲಾಸ್ಪತ್ರೆ ಆವರಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆ ಮಾಡುವಾಗ ಶಿಶುವಿನ ತಲೆಗೆ ಕತ್ತರಿ ತಗುಲಿ ಗಾಯಗೊಂಡ ಘಟನೆ ನಡೆದಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಪೋಷಕರು ಆರೋಪ ಮಾಡಿದ್ದಾರೆ.

ಹಾವೇರಿಯ ಮೊಹಮ್ಮದ್‌ ಮುಜಾಹಿದ್‌ ಅವರ ಪತ್ನಿ ಬೇಬಿ ಅಸ್ಮಾ ಗರ್ಭಿಣಿಯಾಗಿದ್ದು, ಹೆರಿಗೆಗೆಂದು ಆಸ್ಪತ್ರೆಗೆ ಬಂದಿದ್ದಾರೆ. ಡಾ.ಸ್ವಾತಿ ಮತ್ತು ಆಸ್ಪತ್ರೆ ಸಿಬ್ಬಂದಿ ಹೆರಿಗೆ ಮಾಡುವುದಾಗಿ ಶಸ್ತ್ರಚಿಕಿತ್ಸೆ ಕೊಠಡಿಗೆ ಕರೆದುಕೊಂಡು ಹೋಗಿದ್ದಾರೆ.

ಹೆರಿಗೆ ನಂತರ ಶಿಶುವಿನ ಕುರಿತು ಪೋಷಕರಿಗೆ ಮಾಹಿತಿಯನ್ನು ವೈದ್ಯರು ತಿಳಿಸಿದ್ದಾರೆ. ಹೆರಿಗೆ ವೇಳೆ ಹೊಟ್ಟೆಯಿಂದ ಮಗುವನ್ನು ಹೊರಗೆ ತೆಗೆಯಲು ಸಾಕಷ್ಟು ಕಷ್ಟವಾಗಿದೆ. ಈ ವೇಳೆ ಮಗುವಿನ ತಲೆಗೆ ಕತ್ತರಿ ತಾಗಿದ್ದು, ಎರಡು ಹೊಲಿಗೆ ಹಾಕಿದ್ದೇವೆ ಎಂದು ತಿಳಿಸಿದ್ದಾರೆ. ತಲೆಗೆ ಹೊಲಿಗೆ ಹಾಕಿದ ಸ್ಥಿತಿಯಲ್ಲಿಯೇ ನವಜಾತ ಶಿಶುವನ್ನು ಶಸ್ತ್ರಚಿಕಿತ್ಸೆ ಕೊಠಡಿಯಿಂದ ಹೊರಗೆ ತಂದಿರುವ ವೈದ್ಯರು ಪೋಷಕರಿಗೆ ನೀಡಿದ್ದಾರೆ.

ಪೋಷಕರು ಮಗುವಿನ ಪರಿಸ್ಥಿತಿ ನೋಡಿ ಆಕ್ರೋಶಗೊಂಡಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಮಗುವಿನ ಈ ಸ್ಥಿತಿಗೆ ಕಾರಣ, ತಲೆಗೆ ನೋವಾಗಲು ಕಾರಣ ಎಂದು ಅವರು ಆರೋಪ ಮಾಡಿದ್ದಾರೆ. ಘಟನೆ ಕುರಿತು ತನಿಖೆ ಮಾಡಿ ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

You may also like