Home » Bengaluru: ಮಂಗಳಮುಖಿಯರ ಹಗಲುದರೋಡೆ, ಹಣ ಕೊಡದಿದ್ರೆ ಬಟ್ಟೆ ಬಿಚ್ಚಿ ನಿಲ್ತಾರೆ!

Bengaluru: ಮಂಗಳಮುಖಿಯರ ಹಗಲುದರೋಡೆ, ಹಣ ಕೊಡದಿದ್ರೆ ಬಟ್ಟೆ ಬಿಚ್ಚಿ ನಿಲ್ತಾರೆ!

0 comments

Bengaluru: ರಾಜಧಾನಿ ಬೆಂಗಳೂರಿನ ಚಿಕ್ಕಪೇಟೆ ಸೇರಿದಂತೆ ಹಲವೆಡೆ ಕೆಲವು ಮಂಗಳಮುಖಿಯರು ಹಣಕ್ಕಾಗಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಹೌದು, ರಾಜಧಾನಿ ಬೆಂಗಳೂರಿನಲ್ಲಿ ಪುರುಷ ಧೈರ್ಯದಿಂದ ಓಡಾಡಲು ಸಾಧ್ಯವಾಗದ ಪರಿಸ್ಥಿತಿಯನ್ನು ಕೆಲ ಮಂಗಳಮುಖಿಯರು ಸೃಷ್ಟಿಸಿದ್ದಾರೆ.

ನಗರ ಪ್ರಮುಖ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಟ್ರಾಫಿಕ್ ಸಿಗ್ನಲ್, ಮಾರುಕಟ್ಟೆ ಸೇರಿದಂತೆ ಹಲವು ಸ್ಥಳಗಳಲ್ಲಿ ಕಾಣುವ ಮಂಗಳಮುಖಿಯರ ಗುಂಪು ಹಗಲುದರೋಡೆಗೆ ಇಳಿಯುತ್ತಿದೆ.ಚಿಕ್ಕಪೇಟೆಯ ಬಿವಿಕೆ ಅಯ್ಯಂಗಾರ್ ಮುಖ್ಯರಸ್ತೆಯಲ್ಲಿ ಮಂಗಳಮುಖಿಯರು ಅಸಭ್ಯವಾಗಿ ವರ್ತನೆ ತೋರಿದ್ದಾರೆ. ಈ ರಸ್ತೆ ಜನಸಂದಣಿಯಿಂದ ತುಂಬಿ ತುಳುಕುತ್ತಿರುತ್ತಾರೆ. ಹಣ ಕೇಳುವ ನೆಪದಲ್ಲಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಚಿಕ್ಕಪೇಟೆಯ ರಸ್ತೆಯಲ್ಲಿನ ಮಂಗಳಮುಖಿಯರ ಅಸಭ್ಯ ವರ್ತನೆ ಸಿಸಿಟಿವಿ ಕ್ಯಾಮೆರಾ ಮತ್ತ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.ಕೈ ತಟ್ಟಿ ಅವಾಚ್ಯ ಶಬ್ದಗಳಿಂದ ನಿಂದನೆಭಿಕ್ಷಾಟನೆ ಹೆಸರಿನಲ್ಲಿ ಮಂಗಳಮುಖಿಯರು ಹಣ ನೀಡುವಂತೆ ಒತ್ತಡ ಹಾಕುತ್ತಾರೆ.

ಹಣ ಕೊಡದಿದ್ರೆ ಪರ್ಸ್ ಕಿತ್ತುಕೊಂಡು ಬೇಕಾಬಿಟ್ಟಿಯಾಗಿ ವರ್ತಿಸುತ್ತಾರೆ. ಹಣ ನೀಡಲು ಒಪ್ಪದಿದ್ದರೆ ನಡುರಸ್ತೆಯಲ್ಲಿ ಬಟ್ಟೆಬಿಚ್ಚಿ, ಕೈ ತಟ್ಟಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾರೆ.ಇಷ್ಟಕ್ಕೆ ಸುಮ್ಮನಾಗದ ಮಂಗಳಮುಖಿಯರು ಇಷ್ಟೇ ಹಣ ನೀಡಬೇಕೆಂದು ಡಿಮ್ಯಾಂಡ್ ಮಾಡುತ್ತಾರೆ. ಬೆಂಗಳೂರಿನ ರಸ್ತೆಗಳಲ್ಲಿ ಓಡಾಡೋರಿಗೆಲ್ಲ ಮಂಗಳಮುಖಿಯರು ಇದೇ ರೀತಿಯಲ್ಲಿ ಕಿರಿಕಿರಿಯನ್ನುಂಟು ಮಾಡುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಚಿಕ್ಕಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

You may also like