Home » ಹೊಸ ವರ್ಷಾಚರಣೆ: ಪಬ್‌, ಕ್ಲಬ್‌ ಬಾರ್‌ಗಳಿಗೆ ಪೊಲೀಸರಿಗೆ ಮಾರ್ಗಸೂಚಿ ಬಿಡುಗಡೆ

ಹೊಸ ವರ್ಷಾಚರಣೆ: ಪಬ್‌, ಕ್ಲಬ್‌ ಬಾರ್‌ಗಳಿಗೆ ಪೊಲೀಸರಿಗೆ ಮಾರ್ಗಸೂಚಿ ಬಿಡುಗಡೆ

0 comments

ಬೆಂಗಳೂರು: ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಇರಲು ಪಬ್‌ ಆಂಡ್‌ ಕ್ಲಬ್‌, ಬಾರ್‌ ಆಂಡ್‌ ರೆಸ್ಟೋರೆಂಟ್‌ಗೆ 30 ಮಾರ್ಗಸೂಚಿಗಳನ್ನು ಬೆಂಗಳೂರು ಪೊಲೀಸರು ಬಿಡಗಡೆ ಮಾಡಿದ್ದಾರೆ.

ಸೂಚನೆಗಳು ಏನು?

  1. ರಾತ್ರಿ ಸರಿಯಾಗಿ 1 ಗಂಟೆಗೆ ಎಲ್ಲವೂ ಬಂದ್‌ ಆಗಬೇಕು.
  2. ನಿಗದಿತ ಜಾಗಕ್ಕಿಂತ ಹೆಚ್ಚು ಜನರು ಪಬ್ & ಬಾರ್‌ನಲ್ಲಿ ಸೇರುವಂತಿಲ್ಲ.
  3. ವಯಸ್ಸಿನ ಮಿತಿ ಕಡ್ಡಾಯವಾಗಿ ಪಾಲಿಸಲು ಸೂಚನೆ, ಅಪ್ರಾಪ್ತರಿಗೆ ನೋ ಎಂಟ್ರಿ, ಐಡಿ ಕಾರ್ಡ್ ಪರಿಶೀಲನೆ ಕಡ್ಡಾಯ.
  4. ಡ್ರಿಕ್ ಅಂಡ್ ಡ್ರೈವ್ ಗೆ ಅವಕಾಶ ಮಾಡಿಕೊಡಬಾರದು. ಈ ಬಗ್ಗೆ ಪಬ್ & ಬಾರ್ ಗಳಲ್ಲಿ ಡಿಸ್ಪ್ಲೇ ಮಾಡಬೇಕು.
  5. ಎಂಟ್ರಿ ಹಾಗೂ ಎಕ್ಸಿಟ್ ಪಾಯಿಂಟ್ ಗಳಲ್ಲಿ ಸಿಸಿಟಿವಿ ಕಡ್ಡಾಯ. ಇದನ್ನೂ ಓದಿ: ಬಾಂಗ್ಲಾದೇಶದ ಗಾಯಕನ ಸಂಗೀತ ಕಛೇರಿ ರದ್ದು; ಸ್ಥಳದಲ್ಲಿ ಗುಂಪು ದಾಳಿ – 25 ಮಂದಿಗೆ ಗಾಯ
  6. ಮಹಿಳಾ ಸುರಕ್ಷತೆಗೆ ಹೆಚ್ಚು ಗಮನ ಕೊಡಬೇಕು. ಮಹಿಳಾ ಬೌನ್ಸರ್ ಗಳ ನೇಮಕ ಕಡ್ಡಾಯ. ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಇರಬೇಕು. ಮಹಿಳೆಯರಿಗಾಗಿ ಸಹಾಯವಾಣಿ ಅಳವಡಿಕೆ ಕಡ್ಡಾಯ.
    7.ಮ್ಯೂಸಿಕ್ ಹಾಕಿದರೂ ಅತಿ ಹೆಚ್ಚು ಸೌಂಡ್ ಇಡುವಂತಿಲ್ಲ. 50 DB ಮಿತಿಗಿಂತ ಹೆಚ್ಚಿನ ಶಬ್ಧಮಾಡುವಂತಿಲ್ಲ.
  7. ಅನೈತಿಕ ಚಟುವಟಿಕೆಗಳು ನಡೆಸುವಂತಿಲ್ಲ. ಮಾದಕ ವಸ್ತು ಸಂಪೂರ್ಣ ನಿಷೇಧ. ಧೂಮಪಾನಕ್ಕಾಗಿ ಪ್ರತ್ಯೇಕ ಜಾಗ ಮೀಸಲಿರಬೇಕು.
  8. ಪೊಲೀಸರಿಗೆ ಸಹಕಾರ ನೀಡಬೇಕು. ಪರಿಶೀಲನೆಗೆ ಬಂದಾಗ, ಸಿಸಿಟಿವಿ ಪರಿಶೀಲನೆ ಮಾಡುವಾಗ ಸಹಕರಿಸಬೇಕು.
  9. ಬಾರ್ & ಪಬ್ ಗೆ ಬರುವ ಬಗ್ಗೆ ಸರಿಯಾದ ವ್ಯವಸ್ಥೆ ಇರಬೇಕು. ಕ್ರೌಡ್ ಕಂಟ್ರೋಲ್‌ಗಾಗಿ ಬಾರ್ ಕೋಡ್ ಹಾಗೂ ಟೋಕನ್ ಸಿಸ್ಟಮ್ ಇರಬೇಕು. ಕೊನೆಯ ಸಂದರ್ಭದಲ್ಲಿ ಟಿಕೆಟ್ / ಪಾಸ್ ಗೆ ಅವಕಾಶ ಇಲ್ಲ.
  10. ತುರ್ತು & ಅಗ್ನಿಶಾಮಕ ವ್ಯವಸ್ಥೆ ಸರಿಯಾಗಿ ನೋಡಿಕೊಳ್ಳಬೇಕು. ಬೆಂಕಿ ಅವಘಡ ನಡೆದರೆ ನಿಯಂತ್ರಣ ಗೊತ್ತಿರಬೇಕು.
  11. ಸಿಬ್ಬಂದಿ ಬಗ್ಗೆ ಠಾಣೆಯ ವರಿಫಿಕೇಷನ್ ಕಡ್ಡಾಯ. ಎಲ್ಲರೂ ಗುರುತಿನ ಚೀಟಿ ಹಾಕಿಕೊಂಡಿರಬೇಕು.
  12. ಎಲ್ಲೆಂದರಲ್ಲಿ ಪಾರ್ಕಿಂಗ್ ಗೆ ಅವಕಾಶ ನೀಡಬಾರದು. ಪ್ರತ್ಯೇಕ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿರಬೇಕು.
  13. ಎಮರ್ಜೆನ್ಸಿ ಕಾಂಟ್ಯಾಕ್ಟ್ ಡೀಟೆಲ್ಸ್ ಡಿಸ್ಪ್ಲೇ ಮಾಡಿರಬೇಕು.
  14. ಆಕ್ರಮವಾಗಿ ಪ್ರಚಾರ ಮಾಡಬಾರದು. ಉದಾಹರಣೆಗೆ ಅನ್ ಲಿಮಿಟೆಡ್ ಅಲ್ಕೋಹಾಲ್ ನೀಡುತ್ತೇವೆ. ರೆವ್ ಪಾರ್ಟಿ ಈ ರೀತಿ‌ ಪ್ರಚಾರ ಮಾಡಬಾರದು.
  15. ಪಬ್ ಒಳಗೆ ಪಟಾಕಿ ನಿರ್ಬಂಧ.
  16. ಚೂಪಾದ ಮಾರಕ ಆಯುಧಗಳ ಪಬ್ ಬಾರ್ ಒಳಗೆ ತರುವಂತಿಲ್ಲ.
  17. ಲೈಸೆನ್ಸ್ ಇಲ್ಲದ ಬೌನ್ಸರ್ಸ್ ಏಜೆನ್ಸಿಗಳನ್ನು ಬಳಸುವಂತಿಲ್ಲ.
  18. ಕರೆಂಟ್ ಹೋದ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಕಡ್ಡಾಯ. ಪಬ್ ಆವರಣ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು
  19. ಕ್ರೌಡ್ ಕಂಟ್ರೋಲ್ ಗೆ ಬ್ಯಾರಿಕೆಡ್ ಅಳವಡಿಸಿ ಸರದಿ ಸಾಲು ವ್ಯವಸ್ಥೆ ಮಾಡಿಕೊಳ್ಳಲು ಸೂಚನೆ.
  20. ಪ್ರತ್ಯೇಕ ಎಂಟ್ರಿ‌ ಮತ್ತು‌‌ ಎಕ್ಸಿಟ್ ಇರಬೇಕು ಜೊತೆಗೆ ಎಮರ್ಜೆನ್ಸಿ ಎಕ್ಸಿಟ್ ಕೂಡ ಇಡಲು ಸೂಚನೆ.
  21. ರಾಜಕೀಯ ಹಾಗೂ ಧರ್ಮಕ್ಕೆ ಸಂಬಂಧಿಸಿದ ಡಿಜೆ ಪ್ಲೇ ಮಾಡದಿರಲು ಸೂಚನೆ. ನಿಂಧನ ರಹಿತ ಮನರಂಜನೆಗೆ ಅವಕಾಶ.
  22. ಮಾದಕ ವಸ್ತುಗಳ ಬಗ್ಗೆ ಮಾಹಿತಿ ಗಮನಕ್ಕೆ‌ ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು.
  23. ಕುಡಿದು ರಸ್ತೆಗೆ ಬೀಳದಂತೆ ಎಚ್ಚರ ವಹಿಸಬೇಕು.
  24. ಪಬ್,ಬಾರ್ ಮುಚ್ಚುವ ಮುಚ್ಚಿತವಾಗಿ ಮಾಹಿತಿ ನೀಡಿ ಅವಧಿ ಮೀರದಂತೆ ನೋಡಿಕೊಳ್ಳ ಬೇಕು.
  25. ಗ್ರಾಹಕರ ಜೊತೆ‌ ಬೌನ್ಸರ್ಸ್ ಅನುಚಿತವಾಗಿ ವರ್ತಿಸಬಾರದು.
  26. ಪೊಲೀಸರ ಜೊತೆ ಹೊಂದಣಿಕೆ ಮಾಡಿಕೊಂಡು ನಿರ್ವಹಣೆ ಮಾಡಲು ಸೂಚನೆ.
  27. ಒಟ್ಟಾರೆ ಪಬ್ ಹಾಗೂ ಬಾರ್ ಗಳಲ್ಲಿ ಗ್ರಾಹಕರ ಸುರಕ್ಷಿತ, ಶಾಂತಿ‌ ಕಾಪಾಡಲು ಸೂಚನೆ.

You may also like