Home » Hampi: ಹಂಪಿಯಲ್ಲಿ ಗುಡ್ಡ ಹತ್ತೋಕೆ ಹೋಗಿ ಕಾಲು ಜಾರಿ ನಿರ್ಜನ ಪ್ರದೇಶಕ್ಕೆ ಬಿದ್ದ ವಿದೇಶಿ ಪ್ರಜೆ – ಎರಡು ದಿನದ ನಂತರ ಪತ್ತೆಮಾಡಿ ರಕ್ಷಣೆ

Hampi: ಹಂಪಿಯಲ್ಲಿ ಗುಡ್ಡ ಹತ್ತೋಕೆ ಹೋಗಿ ಕಾಲು ಜಾರಿ ನಿರ್ಜನ ಪ್ರದೇಶಕ್ಕೆ ಬಿದ್ದ ವಿದೇಶಿ ಪ್ರಜೆ – ಎರಡು ದಿನದ ನಂತರ ಪತ್ತೆಮಾಡಿ ರಕ್ಷಣೆ

0 comments

Hampi : ಹಂಪಿಗೆ ಪ್ರವಾಸಕ್ಕೆ ಬಂದಿದ್ದ ವಿದೇಶಿ ಪ್ರಜೆಯೊಬ್ಬರು ಗುಡ್ಡದಿಂದ ಕಾಲು ಜಾರಿ ಬಿದ್ದು ಎರಡು ದಿನ ನಿರ್ಜನ ಪ್ರದೇಶದಲ್ಲಿದ್ದು, ಇದೀಗ ಅವರನ್ನು ರಕ್ಷಣೆ ಮಾಡಲಾಗಿದೆ. 

ಹೌದು, ಹಂಪಿ ಅಷ್ಟಭುಜ ಸ್ನಾನ ಗುಡ್ಡದ ಹಿಂಭಾಗದಲ್ಲಿ ವಿದೇಶಿ ಪ್ರಜೆಯೊಬ್ಬರು ಗುಡ್ಡ ಹತ್ತುವಾಗ ಜಾರಿ ಬಿದ್ದಿದ್ದರು. ಪ್ರಾನ್ಸ್‌ ದೇಶದ ಬ್ರೋನೋ ರೋಜರ್ (52) ಗುಡ್ಡ ಹತ್ತಲು ಹೋಗಿ ಕಾಲು ಜಾರಿ ಬಿದ್ದ ವ್ಯಕ್ತಿ. ನಿರ್ಜನ ಪ್ರದೇಶದಲ್ಲಿ ಕಾಲು ಮುರಿದುಕೊಂಡು ‌ ಬಿದ್ದು ರಕ್ತಸ್ರಾವದಿಂದ‌ ನರಳಾಡುತ್ತಿದ್ದ ಬ್ರೋನೋ ರೋಜರ್‌ಗೆ ಕಾಲಿಗೆ ತೀವ್ರವಾಗಿ ಪೆಟ್ಟು ಬಿದ್ದು ನಡೆದಾಡಲು ಆಗುತ್ತಿರಲಿಲ್ಲ. ಆ ಸ್ಥಳ ನಿರ್ಜನ ಪ್ರದೇಶವಾಗಿದ್ದು, ಕಾಲಿಗೆ ತೀವ್ರ ಪೆಟ್ಟಾಗಿ ಗಾಯಗೊಂಡಿದ್ದರಿಂದ ಎರಡು ದಿನ ಅಲ್ಲೇ ಇದ್ದ ಬ್ರೂನೋ ರೋಜರ್ ನಂತರ ತೆವಳಿಕೊಂಡು ಸಮೀಪದ ಬಾಳೆ ತೋಟಕ್ಕೆ ಶುಕ್ರವಾರ ಬಂದಿದ್ದಾರೆ.

ಅವರನ್ನು ಗಮನಿಸಿದ ರೈತರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಸಹಯೋಗದಲ್ಲಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಫ್ರಾನ್ಸ್ ನಿಂದ ಒಬ್ಬರೇ ಹಂಪಿಗೆ ಬಂದಿದ್ದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

You may also like