Home » DK Shivkumar : ಸರ್ ನೀವು ಸಿಎಂ ಆಗೋದು ಯಾವಾಗ ಎಂದ ಮಹಿಳೆ? ಡಿಕೆಶಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ?

DK Shivkumar : ಸರ್ ನೀವು ಸಿಎಂ ಆಗೋದು ಯಾವಾಗ ಎಂದ ಮಹಿಳೆ? ಡಿಕೆಶಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ?

0 comments

DK Shivkumar : ಕರ್ನಾಟಕದಲ್ಲಿ (Karnataka) ಸಿಎಂ ಕುರ್ಚಿ ಚರ್ಚೆ ಜೀವಂತವಿದೆ. ಹೈಕಮಾಂಡ ಹೇಳಿದಂತೆ ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್  (DK Shivakumar)ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದರೂ ಸಹ​ ಈ ಬೆಳವಣಿಗೆ ಯಾವ ವಿರಾಮವೂ ಬಿದ್ದಿಲ್ಲ. ಸ್ವತಃ ಡಿಕೆಶಿ ಹೊರಗೆ ಎಲ್ಲೂ ಗೊಂದಲಗಳಿಲ್ಲ ಎನ್ನುತ್ತಿದ್ದರೂ ಒಳಗೊಳಗೇ ರಾಷ್ಟ್ರೀಯ ನಾಯಕರ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ. ಇದೀಗ ಕಾರ್ಯಕ್ರಮ ಒಂದರಲ್ಲಿ ಮಹಿಳೆಯೊಬ್ಬರು ಡಿಕೆಶಿ ಅವರಿಗೆ ಸರ್ ನೀವು ಸಿಎಂ ಆಗೋದು ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಡಿಕೆ ಶಿವಕುಮಾರ್ ಕೊಟ್ಟ ಏನು ಗೊತ್ತಾ?

ಬೆಂಗಳೂರಿನ ಬಸವನಗುಡಿ ಅವರೇ ಬೆಳೆ ಮೇಳದಲ್ಲಿ ಈ ಒಂದು ಘಟನೆ ನಡೆದಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಭಾಷಣ ಮುಗಿಸಿ ಹೊರಡುವಾಗ ಮಹಿಳೆ ಪ್ರಶ್ನೆ ಮಾಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಸರ್ ಯಾವಾಗ ನೀವು ಸಿಎಂ ಆಗ್ತೀರ? ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಹಿಳೆ ಮಾತು ಕೇಳಿಸಿಕೊಂಡು ಡಿಕೆ ಶಿವಕುಮಾರ್ ಏನು ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ.

You may also like