Home » Packet Milk : ಪ್ಯಾಕೆಟ್ ಹಾಲಿನಲ್ಲೇ ತಿಂಗಳಿಗೆ 1 ಕೆಜಿ ಬೆಣ್ಣೆ ತೆಗೆಯಬಹುದು – ಜಸ್ಟ್ ಹೀಗೆ ಮಾಡಿ ಸಾಕು!!

Packet Milk : ಪ್ಯಾಕೆಟ್ ಹಾಲಿನಲ್ಲೇ ತಿಂಗಳಿಗೆ 1 ಕೆಜಿ ಬೆಣ್ಣೆ ತೆಗೆಯಬಹುದು – ಜಸ್ಟ್ ಹೀಗೆ ಮಾಡಿ ಸಾಕು!!

0 comments

Packet Milk : ಇಂದು ಹಾಲು, ತುಪ್ಪ, ಬೆಣ್ಣೆ, ಮೊಸರು ಎಲ್ಲದಕ್ಕೂ ನಾವು ಅಂಗಡಿಗಳನ್ನು ನೆಚ್ಚಿಕೊಂಡಿದ್ದೇವೆ. ಅದರಲ್ಲೂ ಪ್ಯಾಕೆಟ್ ಹಾಲು ಮೊಸರುಗಳದ್ದೇ, ಹಾವಳಿ. ಪ್ಯಾಕೆಟ್ ಹಾಲು ಖರೀದಿಸಿ, ಅದರಲ್ಲಿಯೇ ಮೊಸರು ಮಾಡಿ, ಮಜ್ಜಿಗೆ ಮಾಡಿ, ಬೆಣ್ಣೆ ತೆಗೆಯೋಣವೆಂದರೆ ಅದು ಸಾಧ್ಯವಾಗದು. ಯಾಕೆಂದರೆ ಮೊದಲೇ ಅದರಲ್ಲಿರುವ ಎಲ್ಲಾ ಸತ್ವಗಳನ್ನು ತೆಗೆದಿರುತ್ತಾರೆ ಎಂಬುದು ಅನೇಕರ ಆರೋಪ. ಆದರೆ ಪ್ಯಾಕೆಟ್ ಹಾಲಿನಲ್ಲೂ ಕೂಡ ನೀವು ಬೆಣ್ಣೆ ತೆಗೆಯಬಹುದು ಎಂಬುದು ಗೊತ್ತೇ? ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್ಸ್.

ಹೌದು, ಹೌದು, ನಂದಿನಿ ಅಥವಾ ಇತರ ಪ್ಯಾಕೆಟ್ ಹಾಲಿನಿಂದ ಕೆ.ಜಿ.ಗಟ್ಟಲೆ ಬೆಣ್ಣೆ ಮಾಡಿ ಸವಿಯಬಹುದು. ಇದು ಸುಲಭ, ಆರೋಗ್ಯಕರ ಮತ್ತು ರುಚಿಕರ. ನಿಮಗೆ ಆರಾಮಗಿ ಮನೆಯಲ್ಲೆ ಬೆಣ್ಣೆ ಮಾಡಿ ಸವಿಯಬಹುದು. ಕಡಿಮೆ ಬಜೆಟ್​​ ಗೆ ನೀವು ದಿನನಿತ್ಯ ತರುವ ಹಾಲಿನಿಂದಲೇ ಬೆಣ್ಣೆ ಮಾಡಿ ತಿನ್ನಬಹುದು. ಹೇಗೆಂದು ನೋಡೋಣ ಬನ್ನಿ.

ಮೊದಲು ಇದಕ್ಕೆ ನಂದಿನಿ ದಪ್ಪ ಹಾಲು ಬೇಕಾಗುತ್ತದೆ. ಅಂದರೆ ಇದಕ್ಕೆ ನೀಲಿ ಪ್ಯಾಕೆಟ್‌ನಲ್ಲಿ ಬರುವ ಹಾಲು ಬಳಸಬೇಡಿ. ಇದರಲ್ಲಿ ಕೆನೆ ಕಡಿಮೆ ಬರುತ್ತದೆ. ಬದಲಿಗೆ ಕೆಂಪು ಬಣ್ಣದ ಶುಭಂ ಅಥವಾ ಹೋಮೋಜಿನೈಸ್ಡ್ ಟೋನ್ಡ್ ಹಾಲು ಬಳಸಿ. ಅರ್ಧ ಲೀಟರ್ ಅಥವಾ ಹೆಚ್ಚಿನ ಪ್ರಮಾಣದ ಹಾಲು ತೆಗೆದುಕೊಳ್ಳಿ. ಒಂದು ತಿಂಗಳ ಕಾಲ ಕೆನೆ ಸಂಗ್ರಹಿಸಿ ಬೆಣ್ಣೆ ತಯಾರಿಸಬಹುದು. ಮೊದಲು ಹಾಲನ್ನು ಪಾತ್ರೆಗೆ ಹಾಕಿ ಒಲೆ ಮೇಲಿಟ್ಟು ಕುದಿಯಲು ಬಿಡಬೇಕು. ಇದಕ್ಕೆ ನೀರು ಹಾಕದೆ ಕುದಿಸಬೇಕು. ಕುದಿಬರುವ ಮುನ್ನ ಒಮ್ಮೆ ಹಾಲನ್ನು ಮಿಕ್ಸ್ ಮಾಡಬೇಕು. ಹಾಲು ಕುದಿಬರಲು ಆರಂಭಿಸಿದಾಗ ಸಣ್ಣ ಉರಿಯಲ್ಲಿ ಇಟ್ಟು ಮತ್ತೆ 5 ನಿಮಿಷ ಕುದಿಬರಲು ಬಿಡಬೇಕು. ನಂತರ ಒಲೆ ಆಫ್ ಮಾಡಿ ಕೆಳಗೆ ಇಳಿಸಿಕೊಂಡು ತಣ್ಣಗಾಗಲು ಬಿಡಿ.

ಸ್ವಲ್ಪ ತಣ್ಣದಾಗ ಬಳಿಕ ಇದನ್ನು ಮುಕ್ಕಾಲು ಭಾಗ ಮುಚ್ಚಳದಿಂದ ಮುಚ್ಚಿ ಫ್ರಿಡ್ಜ್‌ನಲ್ಲಿಡಿ. ಸುಮಾರು 6ರಿಂದ 7 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇಡಬೇಕು. ಅದರಲ್ಲಿ ಕೆನೆ ಬರಲು ಆರಂಭಿಸಿದಾಗ ಯಾವುದೇ ಕಾರಣಕ್ಕೂ ಕೆನೆಯನ್ನು ಅಲುಗಾಡಿಸುವುದು, ಮಿಕ್ಸ್ ಮಾಡುವ ಕೆಲಸ ಮಾಡಬೇಡಿ. ಹಾಲು ತೆಗೆಯುವಾಗ ನಿಧಾನವಾಗಿ ಇಂದು ಬದಿಯಲ್ಲಿ ಮಾತ್ರವೇ ಹಾಲನ್ನು ತೆಗೆದು ಕೆನೆಯನ್ನು ಹಾಗೆಯೇ ಬಿಡಿ. ನಂತರ ದಪ್ಪವಾಗಿ ಬಂದಿರುವ ಕೆನೆಯನ್ನು ನಿಧಾನವಾಗಿ ತೆಗೆದು ಒಂದು ಡಬ್ಬಿಯಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಇಡಬೇಕು. ಇದೇ ರೀತಿ ಒಂದು ತಿಂಗಳ ಕಾಲ ಕೆನೆಯನ್ನು ಹಾಲಿನಿಂದ ಬೇರ್ಪಡಿಸಿ ಈ ಡಬ್ಬಿಯಲ್ಲಿ ತುಂಬಿಸುವ ಕೆಲಸ ಮಾಡಿ. ಒಂದು ತಿಂಗಳಿಗೆ ಬಹಳಷ್ಟು ಕೆನೆ ಸಂಗ್ರಹವಾಗಿರುತ್ತದೆ.

ಈಗ ನೀವು ಸಂಗ್ರಹಿಸಿಟ್ಟಿರುವ ಕೆನೆಯನ್ನು ತೆಗೆದುಕೊಳ್ಳಿ. ಒಂದು ದೊಡ್ಡ ಪಾತ್ರೆಯಲ್ಲಿ ಎಲ್ಲವನ್ನು ಹಾಕಿ ಪಾತ್ರೆಯ ತಳದಲ್ಲಿ 2ರಿಂದ 3 ಸ್ಪೂನ್ ಮೊಸರು ಹಾಕಿ. ನಂತರ ಎಲ್ಲಾ ಕೆನೆ ಇದಕ್ಕೆ ಹಾಕಿ. ನಂತರ ಇದನ್ನು 1 ಗಂಟೆ ಹಾಗೆಯೆ ಬಿಡಿ. ಈಗ ಈ ಕೆನೆ ಮುಚ್ಚುವಷ್ಟು ನೀರು ಹಾಕಿಕೊಂಡು ಸೌಟಿನಿಂದ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ತೆಳುವಾಗಬೇಕು. ಈಗ ಕುಡುಗೂಲಿನ ರೀತಿಯಲ್ಲಿ ಮಿಕ್ಸರ್‌ ಬಳಸಿಕೊಂಡು ತಿರುಗಿಸಿಕೊಳ್ಳುತ್ತಾ ಇರಬೇಕು. ಸುಮಾರು 15ರಿಂದ 20 ನಿಮಿಷ ಮಿಕ್ಸ್ ಮಾಡಿಕೊಳ್ಳುತ್ತಾ ಇದ್ದರೆ ಬೆಣ್ಣೆ ಬರಲು ಆರಂಭಿಸುತ್ತದೆ. ನಂತರ ಕೈ ನೆನೆಸಿಕೊಂಡು ಬೆಣ್ಣೆಯನ್ನು ನಿಧಾನವಾಗಿ ತೆಗೆದು ಉಂಡೆ ಕಟ್ಟಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಬೆಣ್ಣೆ ಮುದ್ದೆ ರೆಡಿಯಾಗಿರುತ್ತದೆ. ನೀವು ಸಹ ಈ ಪ್ಯಾಕೆಟ್ ಹಾಲಿನಲ್ಲಿ ಬೆಣ್ಣೆ ಮಾಡಬಹುದು. ಈ ಬೆಣ್ಣೆಯನ್ನು ಫ್ರಿಡ್ಜ್‌ನಲ್ಲಿ ಇಟ್ಟು 1ವಾರದೊಳಗೆ ಇದನ್ನು ತುಪ್ಪ ಮಾಡಿಕೊಳ್ಳಿ.

You may also like