Home » Tanya:  ಈ ಖ್ಯಾತ ಬಿಗ್ ಬಾಸ್ ಸ್ಪರ್ಧಿಗೆ ಇದೆ ದೊಡ್ಡ ಕಾಂಡೋಮ್ ಸಾಮ್ರಾಜ್ಯ – ಅಚ್ಚರಿ ವಿಡಿಯೋ ವೈರಲ್

Tanya:  ಈ ಖ್ಯಾತ ಬಿಗ್ ಬಾಸ್ ಸ್ಪರ್ಧಿಗೆ ಇದೆ ದೊಡ್ಡ ಕಾಂಡೋಮ್ ಸಾಮ್ರಾಜ್ಯ – ಅಚ್ಚರಿ ವಿಡಿಯೋ ವೈರಲ್

0 comments

Tanya: ಬಿಗ್ ಬಾಸ್ ಸ್ಪರ್ಧಿಯಾಗಿದ್ದ ತಾನ್ಯ ಬಿಗ್ ಬಾಸ್ ಮನೆಯೊಳಗೆ ತನಗೆ ಹಲವು ಫ್ಯಾಕ್ಟರಿಗಳಿವೆ ಎಂದಿದ್ದರು. ಆದರೆ ಈಕೆ ಮಾತನ್ನು ಯಾರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ತಾನ್ಯಾ ಮಿತ್ತಲ್ ಗ್ವಾಲಿಯರ್‌ನಲ್ಲಿರುವ ತಮ್ಮ ಕಾಂಡೋಮ್ ಉತ್ಪಾದನಾ ಕಾರ್ಖಾನೆಯ ವಿಡಿಯೋ ಹಂಚಿಕೊಳ್ಳುವ ಮೂಲಕ ಟ್ರೋಲರ್‌ಗಳಿಗೆ ಖಡಕ್ ಉತ್ತರ ನೀಡಿದ್ದಾರೆ.

ಹೌದು, ತಮ್ಮ ಫ್ಯಾಕ್ಟರಿಯ ಪ್ರವಾಸ ಮಾಡಿಸಿದ ತಾನ್ಯಾ, ಅಲ್ಲಿನ ಕೆಲಸಗಾರರು ಮತ್ತು ಉತ್ಪಾದನಾ ಹಂತಗಳನ್ನು ವಿವರಿಸಿದ್ದಾರೆ. “ನಮ್ಮಲ್ಲಿ ಉನ್ನತ ದರ್ಜೆಯ ವಿದೇಶಿ ಯಂತ್ರೋಪಕರಣಗಳನ್ನು ಬಳಸಲಾಗುತ್ತದೆ. ಕಾಂಡೋಮ್ ಉತ್ಪಾದನೆ ಎಂದರೆ ಜನ ಮಾತನಾಡಲು ಹಿಂಜರಿಯುತ್ತಾರೆ, ಆದರೆ ಇದು ಸಮಾಜಕ್ಕೆ ಅಗತ್ಯವಾದ ಒಂದು ಉದ್ದಿಮೆ” ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಅಲ್ಲಿನ ಲ್ಯಾಬ್‌ಗಳನ್ನು ತೋರಿಸಿ, ಪ್ರತಿ ಉತ್ಪನ್ನವನ್ನೂ ಕಟ್ಟುನಿಟ್ಟಾದ ಪರೀಕ್ಷೆಗೆ ಒಳಪಡಿಸಿದ ನಂತರವೇ ಹೊರಬಿಡಲಾಗುವುದು ಎಂದು ವಿವರಿಸಿದ್ದಾರೆ.

ಗ್ವಾಲಿಯರ್‌ನ ಕಾಂಡೋಮ್ ಫ್ಯಾಕ್ಟರಿ ಹೇಗಿದೆ?

ಬಿಗ್ ಬಾಸ್ ಸ್ಪರ್ಧಿ ತಾನ್ಯ ಮಿತ್ತಲ್ ಕಾಂಡೋಮ್ ಫ್ಯಾಕ್ಟರಿ ಗ್ವಾಲಿಯರ್‌ನಲ್ಲಿದೆ. ತಾನ್ಯ ಮಿತ್ತಲ್ ಫ್ಯಾಕ್ಟರಿಗೆ ಎಂಟ್ರಿಕೊಡುತ್ತದ್ದಂತೆ ಹಲವು ಸಿಬ್ಬಂದಿಗಳು ಹೂಗುಚ್ಚ ನೀಡಿ ಸ್ವಾಗತಿಸಿದ್ದಾರೆ. ಬಳಿಕ ಫ್ಯಾಕ್ಟರಿಯ ಸಿಬ್ಬಂದಿಗಳು, ಲ್ಯಾಬ್ ಟೆಕ್ನಿಶಿಯನ್ಸ್ ಫ್ಯಾಕ್ಟರಿ ವಿವರಣೆ ನೀಡಿದ್ದಾರೆ ಕಾಂಡೋಮ್ ತಯಾರಾಗುವ ರೀತಿ, ವೈದ್ಯಕೀಯ ಪರೀಕ್ಷೆಗಳು, ಮಾನದಂಡಗಳ ಪಾಲನೆ, ಪ್ಯಾಕಿಂಗ್ ಸೇರಿದಂತೆ ಎಲ್ಲಾ ಮಾಹಿತಿ ನೀಡಿದ್ದಾರೆ. ತಾನ್ಯ ಮಿತ್ತಲ್ ಫ್ಯಾಕ್ಟರಿಯಲ್ಲಿ ಕಾಂಡೋಮ್‌ಗಳು ವಿದೇಶದಿಂದ ಆಮದು ಮಾಡಿಕೊಂಡ ಮಶಿನ್‌ಗಳ ಸಹಾಯದಲ್ಲಿ ಉತ್ಪಾದಿಸಲಾಗುತ್ತದೆ. ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂದು ತಾನ್ಯ ಮಿತ್ತಲ್ ಹೇಳಿದ್ದಾರೆ.

ಕಾಂಡೋಮ್ ಉತ್ಪಾದನೆ ಘಟಕದ ಬಳಿಕ ಮಾತನಾಡಿದ ತಾನ್ಯ ಮಿತ್ತಲ್, ಗುಣಮಟ್ಟಕ್ಕೆ ಒತ್ತು ನೀಡಲಾಗಿದೆ. ಸಂಪೂರ್ಣ ಪ್ರಕ್ರಿಯೆ ಮಶಿನ್ ಮೂಲಕವೇ ನಡೆಯುತ್ತದೆ. ಪ್ರತಿ ಹಂತದಲ್ಲಿ ಸರ್ಕಾರದ ಮಾನದಂಡ, ವೈದ್ಯಕೀಯ ಮಾನದಂಡಗಳನ್ನು ಸಂಪೂರ್ಣವಾಗಿ ಪಾಲಿಸಲಾಗುತ್ತದೆ ಎಂದಿದ್ದಾರೆ. ಇದೇ ವೇಳೆ ತಾನ್ಯ ಮಿತ್ತಲ್‌ಗೆ ಬಾಸ್ ತಮ್ಮ ಬಾಸ್ ಎಂದು ಸಿಬ್ಬಂದಿಗಳು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಹಲವರ ಊಹಾಪೋಹಗಳಿಗೆ ಸಿಬ್ಬಂದಿಗಳು ಉತ್ತರ ನೀಡಿದ್ದಾರೆ.

https://www.instagram.com/reel/DStqHzPEa9Q/?igsh=OGt3NmZhNW1obmk0

You may also like