BMRCL: ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ (BMRCL) ಗುಡ್ನ್ಯೂಸ್ ನೀಡಿದೆ. ಹೊಸ ವರ್ಷಾಚರಣೆ ಹಿನ್ನೆಲೆ ಡಿ.31ರಂದು ನಮ್ಮ ಮೆಟ್ರೋದ (Namma Metro) ಮೂರು ಮಾರ್ಗಗಳ ಸೇವಾ ಸಮಯದಲ್ಲಿ ವಿಸ್ತರಣೆ ಮಾಡಿದೆ.
ನಮ್ಮ ಮೆಟ್ರೋದ ನೇರಳೆ, ಹಸಿರು ಹಾಗೂ ಯೆಲ್ಲೋ ಮಾರ್ಗಗಳಲ್ಲಿ ಡಿಸೆಂಬರ್ 31ರಂದು ರಾತ್ರಿ 2:45ರವರೆಗೆ ಕೊನೆಯ ಮೆಟ್ರೋ ರೈಲು ಕಾರ್ಯಾಚರಣೆ ಮಾಡಲಿದೆ ಹಾಗೂ 2026ರ ಜನವರಿ 1ರಂದು ಬೆಳಿಗ್ಗೆ ವಿಶೇಷ ವೇಳಾಪಟ್ಟಿ ಇರಲಿದೆ ಎಂದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ.
ನೇರಳೆ ಮಾರ್ಗ: ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ಕೊನೆಯ ರೈಲು ರಾತ್ರಿ 1:45ಕ್ಕೆ ಹೊರಡಲಿದೆ ಹಾಗೂ ಕೆಂಗೇರಿಯಿಂದ ಬೈಯಪ್ಪನಹಳ್ಳಿಗೆ ಕೊನೆಯ ರೈಲು ರಾತ್ರಿ 2 ಗಂಟೆಗೆ ಹೊರಡಲಿದೆ.
ಹಸಿರು ಮಾರ್ಗ: ಮೆಜೆಸ್ಟಿಕ್ನಿಂದ ನಾಗಸಂದ್ರಕ್ಕೆ ಕೊನೆಯ ರೈಲು ರಾತ್ರಿ 2 ಗಂಟೆಗೆ ಹಾಗೂ ನಾಗಸಂದ್ರದಿಂದ ಮೆಜೆಸ್ಟಿಕ್ಗೆ ಕೊನೆಯ ರೈಲು ರಾತ್ರಿ 2 ಗಂಟೆ ಹೊರಡಲಿದೆ.
ಹಳದಿ ಮಾರ್ಗ: ಆರ್ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಕೊನೆಯ ರೈಲು ರಾತ್ರಿ 3:10ಕ್ಕೆ ಹಾಗೂ ಬೊಮ್ಮಸಂದ್ರದಿಂದ ಆರ್ವಿ ರಸ್ತೆಗೆ ಕೊನೆಯ ರೈಲು ರಾತ್ರಿ 1:30ಕ್ಕೆ ಹೊರಡಲಿದೆ.
ಕೆಂಪೇಗೌಡ ಮೆಜೆಸ್ಟಿಕ್ ನಿಲ್ದಾಣ: ನೇರಳೆ ಮಾರ್ಗದ ವೈಟ್ ಫೀಲ್ಡ್ ಮತ್ತು ಚಲ್ಲಘಟ್ಟ ಕಡೆಗೆ ಹಾಗೂ ಹಸಿರು ಮಾರ್ಗದ ಮಾದಾವರ ಮತ್ತು ರೇಷ್ಮೆ ಸಂಸ್ಥೆ ಕಡೆಗೆ ಹೊರಡುವ ಕೊನೆಯ ರೈಲು ಬೆಳಗಿನ ಜಾವ 2:45ಕ್ಕೆ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ನಿಂದ ಹೊರಡಲಿದೆ.
ಇನ್ನೂ ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಹಸಿರು ಮತ್ತು ನೇರಳೆ ಮಾರ್ಗದಲ್ಲಿ 8 ನಿಮಿಷದ ಅಂತರದಲ್ಲಿ ರೈಲು ಸಂಚಾರವಾಗಲಿದ್ದು, ಹಳದಿ ಮಾರ್ಗದಲ್ಲಿ 15 ನಿಮಿಷದ ಅಂತರದಲ್ಲಿ ರೈಲು ಸಂಚಾರ ಇರಲಿದೆ. ಹೆಚ್ಚು ಜನ ಸೇರುವುದರಿಂದ ಡಿಸೆಂಬರ್ 31ರ ರಾತ್ರಿ 11 ಗಂಟೆಯ ನಂತರ ಕೌಂಟರ್ನಲ್ಲಿ ಟಿಕೆಟ್ ಇರುವುದಿಲ್ಲ. ಈ ಸಮಯದಲ್ಲಿ ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಸ್ಟೇಷನ್ನಲ್ಲಿ ಕೌಂಟರ್ ಕ್ಲೋಸ್ ಆಗಿರುತ್ತದೆ. ಹೀಗಾಗಿ ಕ್ಯೂ ಆರ್ ಕೋಡ್ ಅಥವಾ ಸ್ಮಾರ್ಟ್ ಕಾರ್ಡ್ಗಳನ್ನು ಬಳಸಿ ಪ್ರಯಾಣ ಮಾಡಬೇಕು ಎಂದು ತಿಳಿಸಿದೆ.ಡಿಸೆಂಬರ್ 31ರ ರಾತ್ರಿ 10ಗಂಟೆಯಿಂದ ಎಂಜಿ ರೋಡ್ ಮೆಟ್ರೋ ನಿಲ್ದಾಣ ಬಂದ್ ಆಗಿರಲಿದೆ. ಹೆಚ್ಚಿನ ಜನ ಸೇರುವುದರಿಂದ ಆಗಮನ ಮತ್ತು ನಿರ್ಗಮನ ಎರಡೂ ಕೂಡ ಬಂದ್ ಇರಲಿದೆ. ಆದರೆ ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಸ್ಟೇಷನ್ ಕಾರ್ಯನಿರ್ವಹಿಸುತ್ತದೆ. ಹೊಸ ವರ್ಷದ ಸಂಭ್ರಮವನ್ನು ಸುರಕ್ಷಿತವಾಗಿ ಆಚರಿಸಿ, ಮೆಟ್ರೋ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಬಿಎಂಆರ್ಸಿಎಲ್ ಪ್ರಯಾಣಿಕರಿಗೆ ಕರೆ ನೀಡಿದೆ.
