Home » Kogilu Issue: ಕೋಗಿಲು ಲೇಔಟ್ ನಲ್ಲಿ ಮುಸ್ಲಿಮರ ಮನೆ ತೆರವುಗೊಳಿಸಿದ್ದಕ್ಕೆ ಕೇರಳ ಗೌರ್ಮೆಂಟ್ ಮೂಗು ತೂರಿಸಿದ್ದೇಕೆ?

Kogilu Issue: ಕೋಗಿಲು ಲೇಔಟ್ ನಲ್ಲಿ ಮುಸ್ಲಿಮರ ಮನೆ ತೆರವುಗೊಳಿಸಿದ್ದಕ್ಕೆ ಕೇರಳ ಗೌರ್ಮೆಂಟ್ ಮೂಗು ತೂರಿಸಿದ್ದೇಕೆ?

0 comments

Kogilu Issue : ಕೋಗಿಲು ಬಡಾವಣೆಯಲ್ಲಿನ ಅಕ್ರಮ ಒತ್ತುವರಿಯನ್ನು ಸಿದ್ದರಾಮಯ್ಯ ಸರ್ಕಾರ ತೆರವುಗೊಳಿಸಿತ್ತು. ಇದಕ್ಕೆ ಕೇರಳ ಸರ್ಕಾರ ವ್ಯಾಪಕ ವಿರೋಧವನ್ನು ವ್ಯಕ್ತ ಪಡಿಸುತ್ತಿದೆ. ಕೇರಳದ ಸಂಸದರ ನಂತರ ಶಾಸಕರೊಬ್ಬರು ಅಲ್ಲಿಗೆ ಭೇಟಿ ನೀಡಿದ್ದಾರೆ. ಒಟ್ನಲ್ಲಿ ಕರ್ನಾಟಕ ಸರ್ಕಾರದ ಆಂತರಿಕ ಆಡಳಿತದಲ್ಲಿ ಪಕ್ಕದ ಕೇರಳ ಸರ್ಕಾರ ಮೂಗು ತೂರಿಸುತ್ತಿದೆ. ಹಾಗಿದ್ರೆ ಈ ವಿಚಾರವಾಗಿ ಕೇರಳ ಸರ್ಕಾರ ಮೂಗು ತೂರಿಸಿದ್ದೇಕೆ? ಇಲ್ಲಿದೆ ನೋಡಿ ಕಾರಣ.

ಕೋಗಿಲು ಲೇಔಟ್ ತೆರವು ಪ್ರಕರಣ ಕರ್ನಾಟಕ ಮತ್ತು ಕೇರಳ ಸರ್ಕಾರದ ಮಧ್ಯೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ಕೇರಳ ಸಿಎಂ ಪಿಣರಾಯಿ ಕರ್ನಾಟಕ ಸರ್ಕಾರವನ್ನು ಬುಲ್ಡೋಜರ್ ಸರ್ಕಾರ ಎಂದಿದ್ದರು. ಕೇರಳ ಸಿಎಂ ಪಿಣರಾಯಿ ಮಾತಿಗೆ ಡಿಸಿಎಂ ಡಿಕೆ ಶಿವಕುಮಾರ್​ ಹಾಗೂ ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದರು. ಈ ವಿಚಾರದಲ್ಲಿ ಕೇರಳದ ಸಿಪಿಎಂ ಮಧ್ಯಪ್ರವೇಶಿಸಿರುವುದು ಯಾಕೆ ಎಂದು ಎಲ್ಲರಿಗೂ ಅಚ್ಚರಿಯಾಗಿರಬಹುದು. ಅದಕ್ಕೆ ಕಾರಣವೇನೆಂದು ಹುಡುಕುತ್ತಾ ಹೋದಾಗ ಸಿಕ್ಕಿದ ಉತ್ತರ ಹೀಗಿದೆ.

ಕೇರಳದಲ್ಲಿ ಈಗ ಸಿಪಿಎಂ ನೇತೃತ್ವದ ಎಲ್ ಡಿಎಫ್ ಮುಸ್ಲಿಮರ ವೋಟ್ ಪಡೆಯಲು ವಿಫಲವಾಗುತ್ತಿದೆ. ತೀರಾ ಇತ್ತೀಚೆಗೆ ನಡೆದಿದ್ದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಜಯಗಳಿಸಿತ್ತು. ಇದೀಗ ಮುಸ್ಲಿಮರ ಬೆಂಬಲ ಗಿಟ್ಟಿಸಲೆಂದೇ ಕೇರಳ ಸಿಎಂ ಈ ವಿಚಾರದಲ್ಲಿ ಮೂಗು ತೂರಿಸುತ್ತಿದ್ದಾರೆ. ಕಾಂಗ್ರೆಸ್ ಮುಸ್ಲಿಮರ ವಿರೋಧಿ ಎಂದು ಕೆಲವರು ಅಭಿಪ್ರಾಯಪಡುತ್ತಿದ್ದಾರೆ.

You may also like