5
ಬೆಳ್ತಂಗಡಿ (ದ.ಕ.): ಪದೇಪದೆ ನ್ಯಾಯಾಲಯಕ್ಕೆ ಗೈರಾಗುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ಬೆಳ್ತಂಗಡಿ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ.
ಇ೦ದಬೆಟ್ಟಿನಲ್ಲಿ ಕ್ರಮದಲ್ಲಿ ದ್ವೇಷ ಕಾರ್ಯ ಭಾಷಣ ಮಾಡಿದ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಕಿಶೋರ್ ಕುಮಾರ್ ದಾಖಲಿಸಿದ್ದ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ವಾರಂಟ್ ಜಾರಿ ಮಾಡಿದೆ.
ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ನ.20 ರಂದು ಸುಳ್ಳು ಸಾಕ್ಷಿ ವರದಿಯನ್ನು ಚಿನ್ನಯ್ಯ, ಮಹೇಶ್ ಕೆಟ್ಟ ಮಟ್ಟೆಣ್ಣವರ್, ಜಯಂತ್ ಟಿ., ವಿಠಲ ಗೌಡ, ಸುಜಾತಾ ಭಟ್ ವಿರುದ್ಧ ಸಲ್ಲಿಸಿದ್ದರು. ಈ ವರದಿ ಬಗ್ಗೆ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಎಚ್.ಟಿ. ಅವರು ಡಿ.26 ರಂದು ವಿಚಾರಣೆ ನಡೆಸಿ ಡಿ.29 ಕ್ಕೆ ಮುಂದೂಡಿದ್ದರು.
