Suicide: ಜೀವ ಹೂವಾಗಿದೆ, ಸಂಘರ್ಷ, ನೀನಾದೆ ನಾ ಧಾರಾವಾಹಿ ಖ್ಯಾತಿಯ ಕನ್ನಡದ ಕಿರುತೆರೆ ನಟಿ ನಂದಿನಿ nin ನಿನ್ನೆ ನೇಣು ಬಿಗಿದುಕೊಂಡು ಆತ್ಮಹತ್ಯೆ (Crime) ಮಾಡಿಕೊಂಡಿದ್ದಾರೆ. ಬೆಂಗಳೂರಿನ (Bengaluru) ಆರ್ ಆರ್ ನಗರದಲ್ಲಿ ಈ ಘಟನೆ ನಡೆದಿದೆ. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಡೈರಿ ಒಂದು ಪತ್ತೆಯಾಗಿದೆ.
ಹೌದು, ನಂದಿನಿ ಆತ್ಮಹತ್ಯೆ ಪ್ರಕರಣಕ್ಕೆ (Crime) ಸಂಬಂಧಪಟ್ಟಂತೆ ಕೆಂಗೇರಿ (Kengeri) ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇದೀಗ ನಂದಿನಿ ಆತ್ಮಹತ್ಯೆ ಸಂಬಂಧ ಡೈರಿ ಪತ್ತೆಯಾಗಿದ್ದು, ಇದರಲ್ಲಿ ಕೆಲ ವಿಚಾರಗಳ ಬಗ್ಗೆ ಬರೆದುಕೊಂಡಿದ್ದಾರೆ.
ಈ ಬಗ್ಗೆ ಸ್ನೇಹಿತೆ ತನುಜಾ ಪ್ರತಿಕ್ರಿಯೆ ನೀಡಿದ್ದು, ‘ನಿಜವಾದ ಕಾರಣ ಏನು ಎಂಬುದು ಗೊತ್ತಿಲ್ಲ. ಅವರ ತಂದೆ ತೀರಿಕೊಂಡಿದ್ದರು. ತಂದೆಯ ಸರ್ಕಾರಿ ಕೆಲಸ ಇವಳಿಗೆ ಬಂದಿತ್ತು. ಆದರೆ ಆ ಕೆಲಸ ಮಾಡಲು ನಂದಿನಿಗೆ ಇಷ್ಟ ಇರಲಿಲ್ಲ. 10 ವರ್ಷದಿಂದ ಕಷ್ಟಪಟ್ಟು ನಟನೆಯಲ್ಲಿ ಈ ಸ್ಥಾನಕ್ಕೆ ಬಂದಿದ್ದಳು. ಹಾಗಾಗಿ ಸರ್ಕಾರಿ ಕೆಲಸ ಬೇಡ ಅಂತ ಹೇಳುತ್ತಿದ್ದರು. ಸರ್ಕಾರಿ ಕೆಲಸಕ್ಕೆ ಸೇರು ಎಂದು ಕುಟುಂಬದವರು ಹೇಳಿದ್ದರು. ಚಿತ್ರರಂಗ ಬೇಡ ಅಂತ ಮನೆಯವರು ಹೇಳಿದ್ದರು. ಆ ಬಗ್ಗೆ ಮಾತುಕಥೆ ನಡೆಯುತ್ತಿತ್ತು. ಹಾಗಾಗಿ ಖಿನ್ನತೆಯಲ್ಲಿ ಇದ್ದಳು’ ಎಂದು ಹೇಳಿದ್ದಾರೆ.
ಸದ್ಯ ನಂದಿನಿಯ ರೂಮ್ ನಲ್ಲಿ ಡೈರಿಯೊಂದು ಸಿಕ್ಕಿದ್ದು, ಇದರಲ್ಲಿ ತನಗೆ ಸರ್ಕಾರಿ ಕೆಲಸ ಇಷ್ಟ ಇಲ್ಲ. ಆಕ್ಟಿಂಗ್ ಇಷ್ಟ ಇದೆ, ಮನೆಯಲ್ಲಿ ಯಾರು ನನ್ನ ಮಾತನ್ನ ಕೇಳುತ್ತಿಲ್ಲ ಎಂದು ನಂದಿನಿ ಬರೆದಿದ್ದಾರೆ. ಸದ್ಯ ಈ ಡೈರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 2023 ರಲ್ಲಿ ಅನುಕಂಪದ ಆಧಾರದ ಮೇಲೆ ನಂದಿನಿಗೆ ಸರ್ಕಾರಿ ಕೆಲಸದ ಆಫರ್ ಬಂದಿತ್ತು, ಅದರೆ ಆಕ್ಟಿಂಗ್ ಇಷ್ಟ ಅಂತಾ ಸರ್ಕಾರಿ ಕೆಲಸ ತ್ಯಜಿಸಿದ್ದರು. ತಾನು ದೊಡ್ಡ ನಟಿಯಾಗಬೇಕು ಎಂಬ ಕನಸಿದ್ದ ನಂದಿನಿ ಆರ್ ಆರ್ ನಗರದಲ್ಲಿ ಆಕ್ಟಿಂಗ್ ತರಬೇತಿ ಪಡೆದಿದ್ದರು. ಹೆಸರಘಟ್ಟದ ಖಾಸಗಿ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದ ನಂದಿನಿ ಕಾಲೇಜಿಗೆ ಸರಿಯಾಗಿ ಹೋಗದೇ ಆಕ್ಟಿಂಗ್ ಕ್ಲಾಸ್ ಗೆ ಹೋಗುತ್ತಿದ್ದರು ಎನ್ನಲಾಗಿದೆ.
