Viral photo: ಮದುವೆಗೂ ಮುನ್ನ ಪ್ರೇಯಸಿಯ ಫೋಟೋವನ್ನು ತೋಳಿನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದ ಯುವಕ, ವಿಚ್ಛೇದನದ ನಂತರ ಅದೇ ಟ್ಯಾಟೂವನ್ನು ಗೊರಿಲ್ಲಾದ ಚಿತ್ರವಾಗಿ ಪರಿವರ್ತಿಸಿದ್ದಾನೆ. ಈ ಮೊದಲು ಮತ್ತು ನಂತರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರೀತಿಯಲ್ಲಿ ಇದ್ದಾಗ ಪ್ರೇಮಿಗಳಿಗೆ ತಾವು ಏನು ಮಾಡುತ್ತೇವೆ ಎಂಬುದರ ಅರಿವು ಇರುವುದಿಲ್ಲ. ಅವರಿಗಾಗಿ ಏನೂ ಸಾಧ್ಯವೋ ಅದೆಲ್ಲವನ್ನು ಮಾಡುತ್ತಾರೆ.ಕೆಲವರು ತಮ್ಮ ಪ್ರಿಯಕರನ/ಪ್ರಿಯಕರಳ ಹೆಸರನ್ನು ತಮ್ಮ ದೇಹದ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವುದುಂಟು. ಮತ್ತೆ ಕೆಲವರು ಪತ್ನಿಯ ಹೆಸರಲ್ಲಿ ಮನೆ ಆಸ್ತಿ ಖರೀದಿಸುತ್ತಾರೆ. ಹಾಗೆಯೇ ಇಲ್ಲೋರ್ವ ಯುವಕ ಮದುವೆಗೂ ಮೊದಲು ತನ್ನ ಪ್ರೇಯಸಿಯ ಫೋಟೋವನ್ನು ತನ್ನ ತೋಳಿನ ಮೇಲೆ ಹಾಕಿದ್ದ. ಆದರೆ ಮದುವೆಯ ನಂತರ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿದ್ದು, ವಿಚ್ಛೇದನವೂ ಆಗಿದೆ. ಆದರೆ ವಿಚ್ಛೇದನದ ನಂತರ ಆತ ಪತ್ನಿಯ ಟ್ಯಾಟೂವನ್ನು ತಿದ್ದಿ, ಮೊದಲ ಹಾಗೂ ನಂತರದ ಫೋಟೋ ಹಾಕಿದ್ದು, ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆಗೆ ನೆಟ್ಟಿಗರು ಈ ಫೋಟೋಗೆ ಹಲವು ಹಾಸ್ಯಮಯ ಕಾಮೆಂಟ್ ಮಾಡಿದ್ದಾರೆ.
All is fair in love and war ಪ್ರೀತಿಯಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ತಪ್ಪು ಸರಿಗಳ ಯೋಚನೆಗಳಿಲ್ಲದೇ ಪ್ರೀತಿ ಪಾತ್ರರು ಮಾಡಿದೆಲ್ಲವೂ ಸರಿ ಎನಿಸುತ್ತದೆ. ಆದರೆ ಸಂಬಂಧ ಹಳಸಿದ ನಂತರ ಎಲ್ಲವೂ ಕಹಿಯಾಗಿ ಕಾಣುತ್ತದೆ. ಹಾಗೆಯೇ ಪ್ರೀತಿಯಲ್ಲಿ ಇದ್ದಾಗ ಗಂಡ ತೋಳಿನ ಮೇಲೆ ಹಾಕಿದ ಪತ್ನಿಯ ಮುಖದ ಟ್ಯಾಟೂ ಆತನಿಗೆ ಕಹಿ ನೆನಪಾಗಿ ಕಾಡಲು ಶುರು ಆಗಿದೆ. ಹೀಗಾಗಿ ಅದಕ್ಕೊಂದು ಮುಕ್ತಿ ಕಾಣಿಸಬೇಕು ಎಂದು ಬಯಸಿದ್ದಾನೆ. ಹಾಗಂತ ಆತ ಟ್ಯಾಟೂವನ್ನೇ ಅಳಿಸಿ ಹಾಕಿಲ್ಲ, ಬದಲಾಗಿ ಪತ್ನಿಯ ಫೋಟೋವನ್ನು ಗೊರಿಲ್ಲಾದ ಫೋಟೋವಾಗಿ ಪರಿವರ್ತಿಸಿದ್ದಾನೆ. ಇದು ನೆಟ್ಟಿಗರು ಬಿದ್ದು ಬಿದ್ದು ನಗುವಂತೆ ಮಾಡಿದೆ.ಅಂದಹಾಗೆ ಈ ರೀತಿ ಟ್ಯಾಟೂ ಹಾಕಿದ ವ್ಯಕ್ತಿ ಅಮೆರಿಕಾದ ಲಾಸ್ ಏಂಜಲೀಸ್ ನಿವಾಸಿ. ಡಿವೋರ್ಸ್ ನಂತರ ಸಂಪೂರ್ಣವಾಗಿ ಆಕೆಯ ಫೋಟೋ ಅಳಿಸಿ ಹಾಕುವ ಬದಲು ಆತ ಆ ಫೋಟೋವನ್ನೇ ಗೊರಿಲ್ಲಾದ ಫೋಟೋವಾಗಿ ಪರಿವರ್ತಿಸಿ ದಿನವೂ ಅದನ್ನೂ ನೋಡಿ ಖುಷಿ ಪಡುತ್ತಿದ್ದಾನಂತೆ. ಆತ ತನ್ನ ಸೋಶೀಯಲ್ ಮೀಡಿಯಾದಲ್ಲಿ ಬಿಫೋರ್ ಆಫ್ಟರ್ ಫೋಟೋ ಹಾಕಿದ್ದು, ಫೋಟೋ ನೋಡಿದವರು ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ದಾರೆ.
