Home » ಭಾರತದ ಕ್ಷಮೆಯಾಚಿಸಿದ ದೇಶಭ್ರಷ್ಟ ಲಲಿತ್‌ ಮೋದಿ

ಭಾರತದ ಕ್ಷಮೆಯಾಚಿಸಿದ ದೇಶಭ್ರಷ್ಟ ಲಲಿತ್‌ ಮೋದಿ

0 comments

ಲಂಡನ್: ‘ನಾನು ಹಾಗೂ ಉದ್ಯಮಿ ವಿಜಯ್ ಮಲ್ಯ ಇಬ್ಬರೂ ಭಾರತದಿಂದ ಪರಾರಿಯಾದ ಅತಿದೊಡ್ಡ ದೇಶಭ್ರಷ್ಟರು’ ಎಂದು ವ್ಯಂಗ್ಯಭರಿತ ಶೈಲಿಯಲ್ಲಿ ವಿಡಿಯೊ ಮಾಡಿದ್ದ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಸೋಮವಾರ ಕೇಂದ್ರ ಸರಕಾರದ ಕ್ಷಮೆ ಕೋರಿದ್ದಾರೆ.

ಲಂಡನ್‌ನಲ್ಲಿ ಇತ್ತೀಚೆಗೆ ನಡೆದ ವಿಜಯ್ ಮಲ್ಯ ಅವರ 70ನೇ ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಲಲಿತ್ ಮೋದಿ ಈ ವಿಡಿಯೊ ಮಾಡಿದ್ದರು. ನೆಟ್ಟಿಗರ ಹಾಗೂ ಕೇಂದ್ರ ಸರಕಾರದ ಖಡಕ್ ಉತ್ತರದ ಬೆನ್ನಲ್ಲೇ ಲಲಿತ್ ಮೋದಿ ”ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಯಾರೊಬ್ಬರ ಭಾವನೆಗಳನ್ನು ನೋಯಿಸುವ ಉದ್ದೇಶ ನನ್ನದಾಗಿರಲಿಲ್ಲ. ನನ್ನಿಂದ ಯಾರದೇ ಭಾವನೆಗಳಿಗೆ ಅದರಲ್ಲೂ ಕೇಂದ್ರ ಸರಕಾರಕ್ಕೆ ಬೇಸರವಾಗಿ ದ್ದರೆ, ಮುಜುಗರವಾಗಿದ್ದರೆ ಕ್ಷಮೆಯಾಚಿಸು ತ್ತೇನೆ. ನನಗೆ ಸರಕಾರದ ಬಗ್ಗೆ ಗೌರವವಿದೆ,” ಎಂದು ‘ಎಕ್ಸ್’ನಲ್ಲಿ ಕ್ಷಮೆ ಕೋರಿದ್ದಾರೆ.

You may also like