Shirdi sai baba: ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ, ರಿಲಯನ್ಸ್ ಇಂಡಸ್ಟ್ರಿ ಗ್ರೂಪ್ನ ಕಾರ್ಯಕಾರಿ ನಿರ್ದೇಶಕ ಅನಂತ್ ಅಂಬಾನಿ ಅವರು ಇಂದು ಶಿರ್ಡಿಯ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಶಿರ್ಡಿ ಸಾಯಿಬಾಬಾ ಮಂದಿರದಲ್ಲಿ ನಡೆಯುವ ಧೂಪಾರತಿಯಲ್ಲಿ ಅವರು ಭಾಗಿಯಾಗಿದ್ದಲ್ಲದೇ ಸಾಯಿ ಬಾಬಾ ಸಮಾಧಿಗೆ ನೀಲಿ ಬಣ್ಣದ ಚಾದರವನ್ನು ಹಾಸಿದರು.ಸಾಯಿ ಬಾಬಾ ಮಂದಿರದ ವತಿಯಿಂದ ಅನಂತ್ ಅಂಬಾನಿಗೆ ಸಂಸ್ಥಾನಸಾಯಿಬಾಬಾ ಸಮಾಧಿ ದರ್ಶನದ ನಂತರ ಸಾಯಿಬಾಬಾ ಸಂಸ್ಥಾನದ ಮುಖ್ಯ ಕಾರ್ಯಕಾರಿ ಅಧಿಕಾರಿ ಗೋರಕ್ಷ ಗಡ್ಲಿಕರ್ ಅವರು ದೇಗುಲದ ವತಿಯಿಂದ ಅವರನ್ನು ಸನ್ಮಾನಿಸಿದರು. ಈ ಉಪ ಮುಖ್ಯ ಕಾರ್ಯಕಾರಿ ಭಿಮ್ರಾಜ್ ದರಡೆ ಉಪಸ್ಥಿತರಿದ್ದರು.ಇದೇ ಸಮಯದಲ್ಲಿ ಅನಂತ್ ಅಂಬಾನಿ ಅವರು ಸುಮಾರು 5 ಕೋಟಿ ಮೊತ್ತದ ಹಣವನ್ನು ಡಿಮಾಂಡ್ ಡ್ರಾಫ್ಟ್ ಮೂಲಕ ದೇಣಿಗೆಯಾಗಿ ಸಾಯಿಬಾಬಾ ಸಂಸ್ಥಾನಕ್ಕೆ ನೀಡಿದರು.
