Home » Current Bill : ಹೊಸ ವರ್ಷಕ್ಕೆ ರಾಜ್ಯದ ಜನತೆಗೆ ಕರೆಂಟ್ ಶಾಕ್ – ಪ್ರತಿ ಯೂನಿಟ್‌ಗೆ 10 ಪೈಸೆವರೆಗೆ ಹೆಚ್ಚಳ!!

Current Bill : ಹೊಸ ವರ್ಷಕ್ಕೆ ರಾಜ್ಯದ ಜನತೆಗೆ ಕರೆಂಟ್ ಶಾಕ್ – ಪ್ರತಿ ಯೂನಿಟ್‌ಗೆ 10 ಪೈಸೆವರೆಗೆ ಹೆಚ್ಚಳ!!

0 comments

Current Bill : ಇನ್ನೇನು ಕೆಲವೇ ದಿನಗಳಲ್ಲಿ 2025 ಮುಕ್ತಾಯವಾಗಿ 2026 ರನ್ನು ನಾವೆಲ್ಲರೂ ಸ್ವಾಗತಿಸಲಿದ್ದೇವೆ. ಹೊಸ ವರ್ಷಕ್ಕಾಗಿ ನಾಡಿನ ಜನರು ಹೊಸ ಹುರುಪಿನಿಂದ ಕಾಯುತ್ತಿದ್ದಾರೆ. ಆದರೆ ಈ ನಡುವೆ ರಾಜ್ಯ ಸರ್ಕಾರವು ಹೊಸ ವರ್ಷದ ಸಂದರ್ಭದಲ್ಲಿ ರಾಜ್ಯದ ಜನತೆಗೆ ಕರೆಂಟ್ ಶಾಕ್ ನೀಡಲು ಮುಂದಾಗಿದೆ.

ಹೌದು, ಹೊಸ ವರ್ಷದ ಸಂಭ್ರಮಾಚರಣೆಯ ಬೆನ್ನಲ್ಲೇ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಗ್ರಾಹಕರಿಗೆ ಶಾಕ್ ನೀಡಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ಬಿಲ್ ಪ್ರತಿ ಯೂನಿಟ್ ಗೆ 10 ಪೈಸೆವರೆಗೆ ಹೆಚ್ಚಿಸಲು ನಿರ್ಧರಿಸಿದೆ ಎನ್ನಲಾಗಿದೆ.

 ಆಯೋಗವು ಇದನ್ನು ವಿದ್ಯುತ್ತರ ಹೆಚ್ಚಳ ಎಂದು ಕರೆಯದೆ ಇದನ್ನು ಟಾಪ್ ಅಪ್ ಅಥವಾ ಟ್ರೂ ಅಪ್ ಎಂದು ಕರೆದಿದೆ. ಟಾಪ್ ಅಪ್ ಎಲ್ಲಾ ಎಸ್ಕಾಂಗಳಿಗೆ ಸಮಾನವಾಗಿ ಅನ್ವಯವಾಗಲಿದೆ. ಪ್ರತಿ ಯೂನಿಟ್ ಗೆ ಗರಿಷ್ಟ 8-10 ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಗೃಹಜ್ಯೋತಿ ಯೋಜನೆಯ ನಿಯಮಗಳ ಅನ್ವಯ ಗ್ರಾಹಕರ ಬಿಲ್ನಲ್ಲಿ ಬದಲಾವಣೆಗಳಾಗುತ್ತಿವೆ, ಕೆಲವು ವರ್ಗದವರಿಗೆ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ. ಹೊಸ ಮಾದರಿಯಲ್ಲಿ ಮೂರು ವರ್ಷಕ್ಕೊಮ್ಮೆ ಮಾತ್ರ ದರ ಪರಿಷ್ಕರಣೆ ನಡೆಯಲಿದೆ.

You may also like