Home » Malu Nipanala: ನಾನು ಎಲಿಮಿನೇಟ್ ಆಗಿದ್ದಕ್ಕೆ ಉ. ಕರ್ನಾಟಕ ಅಳುತ್ತಿದೆ ಎಂದ ಮಾಳು- ತಮ್ಮದೇ ಭಾಷೆಯಲ್ಲಿ ಖಡಕ್ ತಿರುಗೇಟು ಕೊಟ್ಟ ಉತ್ತರದ ಕರ್ನಾಟಕ ಮಂದಿ!!

Malu Nipanala: ನಾನು ಎಲಿಮಿನೇಟ್ ಆಗಿದ್ದಕ್ಕೆ ಉ. ಕರ್ನಾಟಕ ಅಳುತ್ತಿದೆ ಎಂದ ಮಾಳು- ತಮ್ಮದೇ ಭಾಷೆಯಲ್ಲಿ ಖಡಕ್ ತಿರುಗೇಟು ಕೊಟ್ಟ ಉತ್ತರದ ಕರ್ನಾಟಕ ಮಂದಿ!!

0 comments

Malu Nipanala: ಬಿಗ್‌ಬಾಸ್‌ ಮನೆಯಿಂದ ಈ ವಾರ ಅಚ್ಚರಿ ಎಲಿಮಿನೇಷನ್‌ ನಡೆದಿದ್ದು, ಉತ್ತರ ಕರ್ನಾಟಕದ ಪ್ರತಿಭೆ ಮಾಳು ನಿಪನಾಳ ಎಲಿಮಿನೇಟ್‌ ಆಗಿ ಬಿಗ್‌ಬಾಸ್‌ನಿಂದ ಹೊರಬಂದಿದ್ದಾರೆ. ಈ ಬೆನ್ನಲ್ಲೇ ಅವರು ಬಿಗ್ ಬಾಸ್ ಮನೆಯಲ್ಲಿ ನಾನು ಇನ್ನೂ ಇರಬೇಕಿತ್ತು. ನಾನು ಎಲಿಮಿನೇಟ್ ಆಗುವಂತಹ ಸ್ಪರ್ಧಿ ಅಲ್ಲ. ಯಾರೇ ವಿನ್ ಆದ್ರೂ ಕೂಡ ನಾನು ಅದನ್ನು ಒಪ್ಪುವುದಿಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

 ಅಷ್ಟು ಮಾತ್ರವಲ್ಲದೆ ನಾನು ಎಲಿಮಿನೇಟ್ ಆಗಿರುವುದಕ್ಕೆ ಇಡೀ ಉತ್ತರ ಕರ್ನಾಟಕ ಅಳುತ್ತಿದೆ. ನನ್ನ ಜನರು ಬೇಸರ ಪಟ್ಟಿಕೊಂಡಿದ್ದಾರೆ ಎಂದೆಲ್ಲಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅಲ್ಲದೆ ನಾನೇ ಗೆಲ್ತೀನಿ ಎನ್ನುವ ಭರವಸೆ ನನಗಿತ್ತು’ ಎಂದಿದ್ದಾರೆ. ‘ನನಗೆ ತಾಳ್ಮೆ, ಆಡುವ ಛಲ ಎರಡೂ ಇತ್ತು, ದೇವರ ಆಶೀರ್ವಾದ, ಜನರ ಬೆಂಬಲ ಎಲ್ಲವೂ ಇತ್ತು. ನಾನು ಮೊದಲಿಗೆ ಎರಡು ವಾರವಷ್ಟೇ ಇರಬಹುದು ಎಂದು ಭಾವಿಸಿದ್ದೆ. ಆದರೆ ಬರೋಬ್ಬರಿ 13 ವಾರ ನನ್ನ ಉಳಿಸಿದ್ದಾರೆ. ಜನ ನನ್ನ ಇಲ್ಲಿವರೆಗೆ ಉಳಿಸಿದ್ದಾರೆ ಅಂದ್ರೆ, ಫೈನಲ್‌ವರೆಗೆ ನನ್ನ ಉಳಿಸಲ್ಲ ಅಂತ ಹೇಗೆ ನಂಬೋದು?’ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಬೆನ್ನಲ್ಲೇ ಮಾಳು ಅವರಿಗೆ ಉತ್ತರ ಕರ್ನಾಟಕದ ಮಂದಿ ತಮ್ಮದೇ ಭಾಷೆಯಲ್ಲಿ ಖಡಕ್ ಉತ್ತರವನ್ನು ಕೊಟ್ಟಿದ್ದಾರೆ.

‘ಅಲ್ಲ ಲೇ ಮಾಳ್ಯ ಉತ್ತರಕರ್ನಾಟಕದಾಗ ಎಲ್ಲರೂ ಅಳಕುಂತರ ಅಂದಿ ಅಲ್ಲ.. ನೀನ್ ನಿನ್ನ ತಾಲೂಕ ಬಿಟ್ಟ ಯಾರಿಗೂ ಗೊತ್ತಿಲ್ಲ. ನೀನು ಆಟ ಆಡಿದ್ದಿ ಅಂದ್ರ ಸಪೋರ್ಟ್ ಮಾಡ್ತಿದ್ರು. ಏನು ಮಾಡ್ಲಾರ್ದ ಇಲ್ಲಿ ಬಂದ್ ಅಳ ಕುಂತ್ರ ಏನು ಆಗಲ್ಲ’ ಎಂದು ಟ್ವಿಟರ್ ಬಳಕೆದಾರರು ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರು, ‘ಬಿಗ್ ಬಾಸ್ ಮನೆಯಲ್ಲಿ ಇವ್ನನ್ನ ನೋಡ್ದಾಗ ಈತ ಒಬ್ಬ ಪ್ರಭುದ್ದ ಅನ್ಕೊಂಡಿದ್ದೆ ಆದರೆ, ತನ್ನ ಬಿಟ್ರೆ ಬಿಗ್ ಬಾಸ್ ಗೆಲ್ಲೋ ಯೋಗ್ಯತೆ ಯಾರಿಗೂ ಆ ಮನೇಲಿಲ್ಲ ಅನ್ನೋ ಮಾತು. ಮೂರ್ಖತನದ ಪರಮಾವಧಿ. ಒಳಗಡೆ ಗಳಿಸಿದ್ದು ಹೊರಗಡೆ ಬಂದು ಕಳ್ಕೊಳೋದು ಅಂತಾರಲ್ಲ. ಅದು ಇದೇ ಇರ್ಬೇಕು’ ಎಂದು ಬರೆಯಲಾಗಿದೆ.

You may also like