13
Belthangady: ಕಳೆದೆರಡು ದಿನಗಳ(ಡಿ.27) ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಬೆಳ್ತಂಗಡಿ ತಾಲೂಕಿನ ಬೆಳಾಲು ಪುರುಷರಬೆಟ್ಟು ನಿವಾಸಿ ರಾಜೇಶ್ ಪಿ. (30) ರವರ ಮೃತದೇಹ ಬೆಳಾಲು ಗ್ರಾಮದ ಬಲಿಪೆ ನೇತ್ರಾವತಿ ನದಿಯಲ್ಲಿ ಡಿ.30ರಂದು ಪತ್ತೆಯಾಗಿದೆ.
ಮನೆಯಿಂದ ಹೊರಟ ರಾಜೇಶ್ ಪಿ, ವಾಪಾಸು ಹಿಂದಿರುಗದೆ ನಾಪತ್ತೆಯಾಗಿದ್ದರು.ಅವರ ಪತ್ತೆಗಾಗಿ ಮನೆಯವರು ಹಾಗೂ ಸ್ಥಳೀಯವರು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿ ನಂತರ ತೀವ್ರ ಹುಡುಕಾಟ ನಡೆಸಿದಾಗ ಇಂದು ಬೆಳಿಗ್ಗೆ ಬಲಿಪೆಯ ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
