Home » BJP: 75 ವರ್ಷ ತುಂಬಿದ ಬಿಜೆಪಿ ನಾಯಕರು ರಾಜೀನಾಮೆ ನೀಡುತ್ತಾರಾ? ಮಾಧ್ಯಮದವರ ಪ್ರಶ್ನೆಗೆ ಅಮಿತ್ ಶಾ ಪ್ರತಿಕ್ರಿಯೆ ಸಿದ್ದು ಹೀಗೆ

BJP: 75 ವರ್ಷ ತುಂಬಿದ ಬಿಜೆಪಿ ನಾಯಕರು ರಾಜೀನಾಮೆ ನೀಡುತ್ತಾರಾ? ಮಾಧ್ಯಮದವರ ಪ್ರಶ್ನೆಗೆ ಅಮಿತ್ ಶಾ ಪ್ರತಿಕ್ರಿಯೆ ಸಿದ್ದು ಹೀಗೆ

0 comments

BJP: ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟ ರಾಜಕೀಯ ನಾಯಕರು ರಾಜೀನಾಮೆ ನೀಡಬೇಕೆಂದು ಮೂಲ ನಿಯಮವಿದೆ. ಈಗಾಗಲೇ ನಮ್ಮ ಕರ್ನಾಟಕದಲ್ಲಿ ಯಡಿಯೂರಪ್ಪನವರಿಗೆ 75 ವರ್ಷ ಆದ ಬಳಿಕ ಅವರನ್ನು ಮೂಲೆಗೆ ಸರಿಸಲಾಯಿತು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರಿಗೂ 75 ವರ್ಷಗಳು ಸಂದಿದ್ದು ಅವರು ರಾಜೀನಾಮೆ ನೀಡುತ್ತಾರೆ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ. ಇದೀಗ ಈ ಕುರಿತಾಗಿ ಅಮಿತ್ ಶಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಹೌದು, ಪಶ್ಚಿಮ ಬಂಗಾಳದಲ್ಲಿ ಮಾಧ್ಯಮ ಸಂವಾದದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು, 75 ವರ್ಷ ತುಂಬಿದ ನಂತರ ಬಿಜೆಪಿ ನಾಯಕರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಬೇಕೇ ಎಂದು ಕೇಳಲಾಯಿತು. ಇದಕ್ಕೆ ಗರಂ ಆದ ಅಮಿತ್ ಶಾ ಅವರು, ನನ್ನ ಪಕ್ಷದ ಬಗ್ಗೆ ನೀವು ಚಿಂತಿಸಬೇಡಿ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಅಂದಹಾಗೆ  75 ವರ್ಷ ದಾಟಿದ ನಾಯಕರನ್ನು ಸಕ್ರಿಯ ರಾಜಕಾರಣದಿಂದ ದೂರ ಇರಿಸುವ ಪರಿಪಾಟವು ಬಿಜೆಪಿಯಲ್ಲಿ ಇದೆ. 75 ವರ್ಷ ತುಂಬಿದ ಮೇಲೆ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗಬೇಕು ಎಂಬಂಥ ನಿಯಮ ಇದೆ ಎಂಬುದನ್ನು ಬಿಜೆಪಿ ನೇರವಾಗಿ ಎಲ್ಲಿಯೂ ಹೇಳಿಲ್ಲ. ಆದರೆ, 2014ರ ಬಳಿಕ ಬಿಜೆಪಿಯು ಇಂಥದ್ದೊಂದು ಮಂಡಳಿಯನ್ನು ಸ್ಥಾಪಿಸಿದೆ. ಇನಿಯ ಮದನುಸಾರ ಅನೇಕ ನಾಯಕರು 75 ವರ್ಷಕ್ಕೂ ಮೊದಲೇ ರಾಜೀನಾಮೆ ನೀಡಿರುವುದನ್ನು ಕಾಣಬಹುದು.

You may also like