New Year : ಜಗತ್ತಿನೆಲ್ಲೆಡೆ ಹೊಸ ವರ್ಷದ ಸಂಭ್ರಮ ಕಳೆಗಟ್ಟಿದೆ. 2025ಕ್ಕೆ ವಿದಾಯ ಹೇಳಿ ಸಂಭ್ರಮ ಸಡಗರದಿಂದ ಜನರು 2026 ರನ್ನು ಬರ ಮಾಡಿಕೊಂಡಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿ ಹೊಸ ವರ್ಷವಾದರೂ ಕೂಡ ಈ ಕ್ಯಾಲೆಂಡರ್ ವರ್ಷವನ್ನು ದೇಶದ ಜನ ಪಾರ್ಟಿ, ಮೋಜು, ಮಸ್ತಿಗಳನ್ನು ಮಾಡುವುದರ ಮುಖಾಂತರ ಸ್ವಾಗತಿಸುತ್ತಿದ್ದಾರೆ.
ಅಮೆರಿಕ, ನ್ಯೂಜಿಲೆಂಡ್, ಇಂಗ್ಲೆಂಡ್ ಸೇರಿದಂತ ವಿದೇಶಗಳಲ್ಲಿ ಭರ್ಜರಿಯಾಗಿ ಹೊಸ ವರ್ಷ ಆಚರಿಸಲಾಗುತ್ತದೆ. ಅಂದ ಹಾಗೆ ಇದೆಲ್ಲದರ ನಡುವೆ ಹೊಸ ವರ್ಷವನ್ನು ಮೊದಲು ಸ್ವಾಗತಿಸುವ ದೇಶ ಯಾವುದು ಎಂಬ ಒಂದು ಇಂಟರೆಸ್ಟಿಂಗ್ ವಿಚಾರ ಮುನ್ನಲೆಗೆ ಬಂದಿದೆ. ಹಾಗಾದರೆ ಹೊಸ ವರ್ಷವನ್ನು ಮೊದಲು ಸ್ವಾಗತಿಸುವ ದೇಶ ಯಾವುದು?
ಸಮಯದ ಆಧಾರದಲ್ಲಿ ಮೊದಲು ಜನವರಿ 1, 2026 ದಿನಾಂಕ ಅಂದರೆ ಹೊಸ ವರ್ಷವನ್ನು ಸ್ವಾಗತಿಸುವ ದೇಶ ಕಿರಿಬತಿ ಐಸ್‌ಲೆಂಡ್. ಪೆಸಿಫಿಕ್ ಒಶಿಯನ್‌ಲ್ಲಿರುವ ಸಣ್ಣ ದೇಶ ಮೊದಲು ಹೊಸ ವರ್ಷವನ್ನು ಸ್ವಾಗತಿಸಲಿದೆ. ಈ ಐಸ್‌ಲೆಂಡ್ UTC+14 ಟೈಮ್‌ಜೋನ್‌ನಲ್ಲಿದೆ. ಈ ಐಸ್‌ಲೆಂಡ್‌ನ್ನು ಕ್ರಿಸ್ಮಸ್ ಲ್ಯಾಂಡ್ ಎಂದು ಕರೆಯುತ್ತಾರೆ. ವಿಶೇಷ ಅಂದರೆ ಕಿರಿಬತಿ ಭಾರತದ ಸಮಯದ ಪ್ರಕಾರ ಡಿಸೆಂಬರ್ 31 ಮಧ್ಯಾಹ್ನ 3:30ಕ್ಕೆ ಹೊಸ ವರ್ಷವನ್ನು ಬರಮಾಡಿಕೊಂಡಿದೆ. ಕಾರಣ ಭಾರತೀಯರಿಗೆ ಡಿಸೆಂಬರ್ 31ರ ಮಧ್ಯಾಹ್ನ 3.30 ನಿಮಿಷಕ್ಕೆ ಕಿರಿಬತಿಯಲ್ಲಿ ಜನವರಿ 1 , 2026ರ ಮಧ್ಯರಾತ್ರಿ ಆಗಿರುತ್ತದೆ.
ಇನ್ನು ಹೊಸ ವರ್ಷವನ್ನು ಬರಮಾಡಿಕೊಳ್ಳುವ ಆದೇಶಗಳ ಪೈಕಿ ಭಾರತಕ್ಕೆ 15ನೇ ಸ್ಥಾನವಿದೆ. ಆಸ್ಟ್ರೇಲಿಯಾ, ಚೀನಾ, ಸಿಂಗಾಪೂರ ಸೇರಿದಂತೆ ಹಲವು ರಾಷ್ಟ್ರಗಳ ಬಳಿಕ ಭಾರತ ಹೊಸ ವರ್ಷವನ್ನು ಸ್ವಾಗತ ಮಾಡುತ್ತದೆ.
