8th Pay Commission: ಕೇಂದ್ರ ಸರ್ಕಾರ ತನ್ನ ನೌಕರರಿಗೆ ಗುಡ್ ನ್ಯೂಸ್ ನೀಡಿದ್ದು, ಬಹುನಿರೀಕ್ಷಿತ 8ನೇ ಕೇಂದ್ರ ವೇತನ ಆಯೋಗ(ಸಿಪಿಸಿ) ರಚನೆಗೆ ಅನುಮೋದನೆ ನೀಡಿದೆ. ಈ ಆಯೋಗವು ರಚನೆಯಾದ 18 ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಬೇಕು ಎಂದು ಗಡುವು ನೀಡಲಾಗಿದೆ. ಆದರೆ ಜನವರಿ 1, 2026 ರಿಂದಲೇ 8ನೇ ವೇತನ ಆಯೋಗ ಜಾರಿಯಾಗಲಿದೆ, ಕೇಂದ್ರ ಸರಕಾರಿ ನೌಕರರ ವೇತನದಲ್ಲಿ ಭರ್ಜರಿ ಏರಿಕೆಯಾಗಲಿದೆ. ಹಾಗಿದ್ದರೆ ಯಾವ ಯಾವ ಲೆವೆಲ್ ನಲ್ಲಿ, ಎಷ್ಟೆಷ್ಟು ಸಂಬಳ ಹೆಚ್ಚಾಗುತ್ತದೆ ಎಂದು ನೋಡೋಣ.
ಹೌದು, ಹೊಸ ವರ್ಷಕ್ಕೆ ಕೇಂದ್ರ ಸರ್ಕಾರ ನೌಕರರಿಗೆ ಬಂಪರ್ ಗಿಫ್ಟ್ ನೀಡಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರ ಲೆವಲ್1ನಿಂದ ಲೆವೆಲ್ 18ರ ವರೆಗಿನ ಎಲ್ಲಾ ಉದ್ಯೋಗಿಗಳ ವೇತನ ಹೆಚ್ಚಳವಾಗಲಿದೆ. ಈ ಬಾರಿಯ ವೇತನ ಹೆಚ್ಚಳದ ವಿಶೇಷತೆ ಎಂದರೆ ಬೇಸಿಕ್ ಸ್ಯಾಲರಿ ಭಾರಿ ಹೆಚ್ಚಳವಾಗುತ್ತಿದೆ. ಇದರಿಂದ ಪ್ರತಿಯೊಬ್ಬ ವೇತನ ಗಣನೀಯವಾಗಿ ಏರಿಕೆಯಾಗುತ್ತಿದೆ.
ಕೇಂದ್ರ ಸರ್ಕಾರದ 18 ಲೆವೆಲ್ ಉದ್ಯೋಗಿಗಳು
ಲೆವೆಲ್ 1: ಆರಂಭಿಕ ಲೆವೆಲ್, ಗ್ರೂಪ್ ಡಿ ನೌಕಕರು
ಲೆವೆಲ್ 2-9: ಗ್ರೂಪ್ ಸಿ ನೌಕರರು
ಲೆವೆಲ್ 10-12: ಗ್ರೂಪ್ ಬಿ ನೌಕರರು
ಲೆವೆಲ್ 13-18 : ಗ್ರೂಪ್ ಎ ನೌಕರರು
ಪಿಯೋನ್ ಸೇರಿ ಡಿ ಗ್ರೂಪ್ ನೌಕರರು: 45,000 ರೂಪಾಯಿ (ಸದ್ಯ 18,000 ರೂಪಾಯಿ)
ಲೆವೆಲ್ 5:62,700 ರೂಪಾಯಿ (ಸದ್ಯ ವೇತನ 29,200 ರೂಪಾಯಿ)
ಲೆವೆಲ್ 10: 1,20,615 ರೂಪಾಯಿ (ಸದ್ಯ 56,100 ರೂಪಾಯಿ)
ಲೆವೆಲ್ 15:3,91,730 ರೂಪಾಯಿ (ಸದ್ಯ 1,82,200 ರೂಪಾಯಿ)
ಲೆವೆಲ್ 18: 5,37,500 ರೂಪಾಯಿ (ಸದ್ಯ 2,50,00 ರೂಪಾಯಿ)
