11
ಹೊಸದಿಲ್ಲಿ: ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ 100 ಎಂಜಿಗೆ ಮೇಲ್ಪಟ್ಟ ನಿಮುಸುಲೈಡ್ ನೋವು ನಿವಾರಕ ಮಾತ್ರೆಗಳ ಮೇಲೆ ಕೇಂದ್ರ ಸರಕಾರ ನಿಷೇಧ ಹೇರಿದೆ. ನೋವು ನಿವಾರಕ ಅಂಶ ಒಳಗೊಂಡ ನಿಮುಸುಲೈಡ್ ಬಳಕೆ, ಉತ್ಪಾದನೆ, ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೇಂದ್ರ ಆರೋಗ್ಯ ಸಚಿವಾಲಯ ನಿಷೇಧಿಸಿದೆ.
ಜನರ ಆರೋಗ್ಯದ ಮೇಲೆ ಗಂಭೀರ ಸಮಸ್ಯೆ ಉಂಟು ಮಾಡುತ್ತಿದ್ದ ಹಿನ್ನೆಲೆಯಲ್ಲಿ ನಿಷೇಧದ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಶಿಫಾರಸಿನಂತೆ ನಿಷೇಧದ ಕ್ರಮ ಕೈಗೊಳ್ಳಲಾಗಿದೆ. 1940ರ ಔಷಧ ಮತ್ತು ಸೌಂದರ್ಯವರ್ದಕ ಕಾಯಿದೆಯ ಸೆಕ್ಷನ್ 26 ‘ಎ’ ಅಡಿಯಲ್ಲಿ ನಿಷೇಧಿಸಲಾಗಿದೆ.
